ಈ ಆಸೆ, ದುರಾಸೆ, ಮೋಹ, ಕಾ-ಮ, ದ್ವೇ-ಷ ಇಂತಹ ಕೆಟ್ಟ ಭಾವನೆಗಳನ್ನು ಹೊಂದಿರುವ ವ್ಯಕ್ತಿಯಿಂದ ಯಾವುದೇ ಕಾರಣಕ್ಕೂ ಯಾರಿಗೂ ಒಳಿತಾಗುವುದಿಲ್ಲ. ಈಗಂತೂ ಈ ಮನುಷ್ಯನಲ್ಲಿ ಪ್ರೀತಿ, ನಂಬಿಕೆ, ಹೊಂದಾಣಿಕೆ ಅನ್ನುವುದೇ ಕಡಿಮೆ ಆಗಿದೆ. ಈಗೀಗಂತೂ ಈ ಅಕ್ರಮ ಸಂಬಂಧ, ಕೊ-ಲೆ, ಹ-ತ್ಯೆಯಂತಹ ಘಟನೆಗಳು ಹೆಚ್ಚಾಗಿದೆ. ಮದುವೆ ಆಗಿದ್ದರೂ ಸಂಸಾರ ಸರಿದೂಗಿಸಿಕೊಂಡು ಹೋಗುವ ಬದಲು ಪರ ಪುರುಷ ಅಥವಾ ಪರ ಹೆಣ್ಣಿನ ಸಂಗಡ ಮಾಡಿಕೊಂಡು ತಮ್ಮ ಜೀವನವನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮದುವೆ ಅನ್ನುವ ಪದಕ್ಕೆ ಇದೀಗ ಅರ್ಥವೇ ಇಲ್ಲದಂತಾಗಿದೆ.
ಈಗಿನ ಈ ಯುವಕರು ಯಾಕಾದರೂ ಮದುವೆ ಆಗುತ್ತಾರೋ ಅನ್ನುವಷ್ಟರಮಟ್ಟಿಗೆ ಪರಿಸ್ಥಿತಿ ಹೋಗಿದೆ. ಮದುವೆ ಆಗಿ ಕೆಲವೇ ವರ್ಷದಲ್ಲಿ ಏನೇನೋ ಸಮಸ್ಯೆಗಳನ್ನು ತಂದುಕೊಳ್ಳುತ್ತಾರೆ. ಇವತ್ತು ನಾವು ಹೇಳುವ ಈ ಘಟನೆ ಕೇಳಿದರೆ ನಿಮಗೂ ಯಾಕಪ್ಪಾ ಈ ಜನರು ಹೀಗೆ ಅಂತ ಅನ್ನಿಸಿ ಬಿಡುತ್ತದೆ. ಹೌದು, ಅವರದ್ದು ಸುಖೀ ಸಂಸಾರ ಆಗಿತ್ತು. ಮದುವೆ ಆಗಿ ಒಂದಲ್ಲ ಎಂಟು ವರ್ಷ ಗಳು ಕಳೆದಿತ್ತು. ಜೊತೆಗೆ ಆರು ವರ್ಷದ ಮಗ ಕೂಡ ಇದ್ದ. ಗಂಡ ಪ್ರತಿದಿನ ಕೆಲಸಕ್ಕೆ ಹೋಗಿ ದುಡಿದು ಹೆಂಡತಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಆದರೆ ಮದುವೆ ಆದ ಎಂಟು ವರ್ಷದ ನಂತರ ಇವರ ಬದುಕು ಛಿದ್ರವಾಗಿ ಬಿಟ್ಟಿದೆ.
ಹೌದು ಅದು ಕೂಡ ಹೆಂಡತಿಯ ಮಾವನ ಎಂಟ್ರಿಯಿಂದ. ಆಕೆಯ ಮಾವ ಅಂದರೆ ಅಮ್ಮನ ತಮ್ಮ ಅತೀ ಶ್ರೀಮಂತನಾಗಿದ್ದ, ಆತನಿಗೂ ಮದುವೆ ಆಗಿತ್ತು. ಆದರೆ ದಿಢೀರ್ ಆಗಿ ಆಕೆ ತೀರಿಕೊಂಡು ಬಿಟ್ಟಿದ್ದಳು. ಹಾಗಾಗಿ ಏಕಾಂಗಿತನ ಅನುಭವಿಸುತ್ತಿದ್ದ ಮಾವನ ಕಣ್ಣು ತನ್ನ ಅಕ್ಕನ ಮಗಳ ಮೇಲೆ ಬೀಳುತ್ತದೆ. ಆಕೆಗೆ ಐಶಾರಾಮಿ ಬದುಕಿನ ಆಸೆ ತೋರಿಸಿ ಆಕೆಯನ್ನು ತನ್ನತ್ತ ಸೆಳೆಯುತ್ತಾನೆ. ಈಕೆಯೂ ಮಾವನ ಜೊತೆ ಊರಿಡಿ ತಿರುಗಾಡಲು ಆರಂಭಿಸುತ್ತಾಳೆ, ಪರಸ್ಪರ ಸಂಬಂಧ ಕೂಡ ಬೆಳೆಸಿರುತ್ತಾರೆ. ಇವರಿಬ್ಬರ ಈ ಸಂಬಂಧ ಗಂಡನಿಗೆ ತಿಳಿದು ತೀವ್ರ ನೊಂದುಕೊಂಡು ಹೆಂಡತಿಯ ಹತ್ತಿರ ಈ ರೀತಿ ಮಾಡಬೇಡ. ಮದುವೆ ಅಗಿ ಮಗ ಇದ್ದಾನೆ, ನಾವು ಚೆನ್ನಾಗಿರೋಣ ಅಂತ ಬುದ್ಧಿವಾದ ಹೇಳುತ್ತಾನೆ.
ಆದರೆ ಇದರಿಂದ ಸಿಟ್ಟಾದ ಆಕೆ ತನ್ನ ಗಂಡನಿಗೆ ವಾರ್ನಿಂಗ್ ಕೊಡುತ್ತಾಳೆ, ನಮ್ಮಿಬ್ಬರ ನಡುವೆ ಬಂದರೆ ಮಗನನ್ನೂ ನಿನ್ನನ್ನೂ ಸಾಯಿಸಿ ಬಿಡುತ್ತೇವೆ ಅನ್ನುತ್ತಾಳೆ. ಇದರಿಂದ ಬಡಪಾಯಿ ಗಂಡ ನೋವು ತಡೆಯಲಾರದೆ ಮಗನನ್ನೂ ಸಾಯಿಸಿ ತಾನೂ ನೀರಿಗೆ ಹಾರಿ ಪ್ರಾಣ ಬಿಡುತ್ತಾನೆ, ಅದಕ್ಕಿಂತ ಮುನ್ನ ತನ್ನ ಹಾಗೂ ಮಗನ ಸಾವಿಗೆ ನನ್ನ ಹೆಂಡತಿ ಹಾಗೂ ಆಕೆಯ ಮಾವನ ಜೊತೆಗಿನ ಅಕ್ರಮ ಸಂಬಂಧ ಎಂದು ವಿಡಿಯೋ ರೆಕಾರ್ಡ್ ಮಾಡಿಟ್ಟುಕೊಂಡಿದ್ದ. ಇದು ಪೊಲೀಸ್ ತನಿಖೆ ವೇಳೆ ದೊರಕಿದ್ದು ಇಬ್ಬರೂ ಜೈಲು ಸೇರಿದ್ದಾರೆ. ಈ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ನಮಗೆ ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.