VRL Company Jobs: ಕರ್ನಾಟಕದಲ್ಲಿ ಇದೀಗ ನಿರುದ್ಯೋಗಿಗಳಿಗೆ ವಿ ಆರ್ ಎಲ್ ಕಂಪನಿಯಿಂದ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು ಎಲ್ಲಾ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಇನ್ನು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಶ್ಯವಿರುವ ಶೈಕ್ಷಣಿಕ ಅರ್ಹತೆ ಎಂದರೆ SSLC, ITI ಮಾಡಿದಂತಹ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಹಾಗೆಯೇ ಇದು ಸಂಪೂರ್ಣವಾಗಿ ಖಾಸಗಿ ಉದ್ಯೋಗ ವಾಗಿರುತ್ತದೆ
VRL Company Job
ವಿ ಆರ್ ಎಲ್ ಲಾಜಿಸ್ಟಿಕ್ ಲಿಮಿಟೆಡ್ ನಿಂದ ನೇಮಕಾತಿ ನಡೆಯುತ್ತಿದ್ದು ಹುಬ್ಬಳ್ಳಿ ಕರ್ನಾಟಕ ವಿಭಾಗದಿಂದ ಈ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ ಉದ್ಯೋಗ ಸ್ಥಳ ಹುಬ್ಬಳ್ಳಿ ಆಗಿದ್ದು ಈ ಉದ್ಯೋಗಕ್ಕೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ITI electronics candidates ಆಗಿರಬೇಕು ಜೊತೆಗೆ ಎಲೆಕ್ಟ್ರಾನಿಕ್ ಡಿವೈಸ್ ಮೆಂಟೇನೆನ್ಸ್ ನಲ್ಲಿ ಎಕ್ಸ್ಪೀರಿಯೆನ್ಸ್ ಹೊಂದಿರಬೇಕಾಗುತ್ತದೆ.
ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ಹುಬ್ಬಳ್ಳಿಯಲ್ಲಿ ನೇಮಕಾತಿ ಮಾಡಲಾಗುತ್ತದೆ ಮತ್ತು ಮಾಸಿಕ ವೇತನ ನೋಡುವುದಾದರೆ ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ 15,000 ದಿಂದ 20000ವರೆಗೆ ಸಂಬಳವಿರುತ್ತದೆ ಈ ಒಂದು ಸಂಬಳ ನಿಮ್ಮ ಕೆಲಸದ ಅನುಭವದ ಮೇಲೆ ಕೊಡುತ್ತಾರೆ ಹೆಚ್ಚಿನ ಮಾಹಿತಿಗಾಗಿ ಹಾಗೂ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಈ 9342559394 ಸಂಖ್ಯೆಗೆ ಕರೆ ಮಾಡಿ ಮತ್ತು career@vrllogistics.com ಗೆ resume ಅನ್ನು ಮೇಲ್ ಮಾಡಿ ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಪರೀಕ್ಷೆಗಳು ಇರುವುದಿಲ್ಲ ಸಂದರ್ಶನದ ಮೂಲಕ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ.
ಅಂತೆಯೇ ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ಕ್ಯಾಂಟೀನ್ ಸೌಲಭ್ಯವಿರುತ್ತದೆ ಇನ್ನೂ ಈ ಕೆಲಸಕ್ಕೆ ಅಗತ್ಯವಾದ ಎಲ್ಲಾ ಮಾಹಿತಿಗಳನ್ನು ಸಂದರ್ಶನದಲ್ಲಿ ಸಂದರ್ಶನದಲ್ಲಿ ಸ್ಪಷ್ಟವಾಗಿ ಅಭ್ಯರ್ಥಿಗಳಿಗೆ ನೀಡುತ್ತಾರೆ ಉದ್ಯೋಗವನ್ನು ಹುಡುಕುತ್ತಿರುವಂತಹ ನಿರುದ್ಯೋಗಿ ಅಭ್ಯರ್ಥಿಗಳು ಈ ಒಂದು ಉದ್ಯೋಗಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.