umashree-home

ನಟಿ ಉಮಾಶ್ರೀ ಮನೆ ಮೊದಲ ಬಾರಿಗೆ ನೋಡಿ…

TODAY NEWS / ಕನ್ನಡ ಸುದ್ದಿಗಳು

ಕನ್ನಡ ಚಿತ್ರರಂಗ ಕಂಡ ಅಪ್ರತಿಮ ಕಲಾವಿದರಲ್ಲಿ ನಟಿ ಉಮಾಶ್ರೀ ಕೂಡ ಒಬ್ಬರು ಅವರ ವಿಭಿನ್ನ ಶೈಲಿಯ ನಟನೆ ಮಾತು ಎಂತಹವರನ್ನು ಪರದೆಯ ಮುಂದೆ ಕುರಿಸುವಂತಹದ್ದು. ಉಮಾಶ್ರೀ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ? ‘ಉಮಾಶ್ರೀ’ ಎನ್ನುವ ಹೆಸರು ಕೇಳುತ್ತಿದ್ದಂತೆ ನಗು, ಕರುಣೆ, ಪ್ರೀತಿ ಎಲ್ಲಾ ಭಾವನೆ ಒಟ್ಟೊಟ್ಟಿಗೆ ಬರುತ್ತದೆ. ವಿಡಿಯೋ ನೋಡಲು ಕೊನೆತನಕ ಓದಿ.

ಉಮಾಶ್ರೀ ಎನ್ನುವುದು ಬರೀ ಹೆಸರಲ್ಲಿ, ಅದೊಂದು ಶಕ್ತಿ. ನೊಂದ ಹೆಣ್ಣಿನ ಪ್ರತೀಕ, ಹೆಣ್ಣು ಅಬಲೆಯಲ್ಲ ಏನಾದರೂ ಸಾಧಿಸಬಹುದು ಎಂಬುದಕ್ಕೆ ಉಮಾಶ್ರೀ ಅವರು ಜೀವಂತ ಉದಾಹರಣೆ.ಉಮಾಶ್ರೀ ಮೇ 10, 1957ರಂದು ತುಮಕೂರಿನಲ್ಲಿ ಜನಿಸಿದರು. ತುಮಕೂರು ಜಿಲ್ಲೆಯ ನೊಣವಿನಕೆರೆ ಗ್ರಾಮದಲ್ಲಿ ಜನಿಸಿದರು. ಅವರ ಜೀವನ ಬಡತನದ ಬವಣೆಯಲ್ಲಿ ಮೂಡಿ ಬಂದದ್ದು.

Happy Birthday, Umashree! Five Roles that prove that she is the most  vibrant and versatile actor in Kannada | The Times of India

ಹಲವಾರು ಐತಿಹಾಸಿಕ, ಪೌರಾಣಿಕ ಪಾತ್ರಗಳನ್ನು ನಿರ್ವಹಿಸಿ, ಹವ್ಯಾಸಿ ರಂಗಭೂಮಿಯಲ್ಲಿ ಬಿ.ವಿ. ಕಾರಂತ್, ನಾಗಾಭರಣ, ಕೃಷ್ಣಸ್ವಾಮಿ ಅವರುಗಳ ನಿರ್ದೇಶನದಲ್ಲಿ ಅನೇಕ ನಾಟಕಗಳಲ್ಲಿ ಅಭಿನಯಿಸಿದಾಕೆ ಉಮಾಶ್ರೀ.ಕೆಲವೊಂದು ಸಿನಿಮಾಗಳು ಬರಿ ಉಮಾಶ್ರೀ ಅವರಿಂದ ಸಕ್ಸಸ್ ಕಂಟಿವೆ ಅನ್ನುವುದು ಅಷ್ಟೇ ಸತ್ಯ. ಚಿತ್ರ ಹೀರೋಯಿನ್ದು ಆಗುತ್ತಾ ಅಥವಾ ಅದರಲ್ಲಿ ಪಾತ್ರ ಮಾಡಿರುವ ಉಮಾಶ್ರೀ ಅವರಿಂದ ಗೆಲ್ಲುತ್ತಾ ಎನ್ನುವ ಗೊಂದಲಕ್ಕೆ ಸಿನಿಮಾ ವಿಮರ್ಶಕರು ಒಳಗಾಗುತ್ತಿದ್ದರು.

ಅಂದರೆ ತಿಳಿಯುತ್ತದೆ ವಿಮಾಶ್ರೀ ಅವರ ನಟನ ಕೌಶಲ್ಯ ಹೇಗಿತ್ತು ಎನ್ನುವುದು. ಹಾಗಾದರೆ ಅವರ ಪ್ರೀತಿಯ ಮನೆ ಹೇಗಿದೆ ಕೆಲವು ತಿಂಗಳ ಹಿಂದೆ ಅಲ್ಲಿ ಏನಾಯ್ತು ಎನ್ನುವುದು ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ. ಇದೆ ನೋಡಿ ನಟಿ ಉಮಾಶ್ರೀ ಅವರ ಪ್ರೀತಿಯ ಮನೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ವಿದ್ಯಾನಗರದಲ್ಲಿ ಇರುವವರಿಗೆ ಅಚ್ಚುಮೆಚ್ಚು. ಈಗ ರಾಜಕೀಯದಲ್ಲಿ ತೊಡಗಿಸಿಕೊಂಡಿರುವ ಉಮಾಶ್ರೀ

ಅವರು ಸುಂದರದ ಪರಿಸರದ ಮಧ್ಯ ಇರುವ ಈ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಆದರೆ ಕೆಲವು ತಿಂಗಳ ಹಿಂದೆ ಉಮಾಶ್ರೀ ಅವರು ಬೆಂಗಳೂರಿನ ಆರ್ ಆರ್ ನಗರದ ಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದಾಗ ಅವರು ಮನೆಯಲ್ಲಿ ಇಲ್ಲದಿರುವುದನ್ನು ಹೊರೆತು ಹೊಂಚು ಹಾಕಿದ ಕಳ್ಳರು ರಾತ್ರಿ ಹೊತ್ತಿನಲ್ಲಿ ಮನೆಗೆ ನುಗ್ಗಿ ಲಾಕರ್ ಹೊಡೆದು ಮನೆಯಲ್ಲಿ ಇದ್ದ ಹಣವನ್ನು ದೋಚಿದರು.

ನಂತರ ಕಾರ್ಯಾಚರಣೆ ನಡೆಸಿ ಇಬ್ಬರು ಕಳ್ಳರನ್ನು ಹಿಡಿದ ಪೊಲೀಸರು ನಟಿ ಉಮಾಶ್ರೀ ಮನೆಯಲ್ಲಿ ಕಳ್ಳತನ ಮಾಡಿದ್ದ ರೂ.1,94,000 ಕಳ್ಳರಿಂದ ವಶಪಡಿಸಿಕೊಂಡರು. ಈಗ ಹೆಚ್ಚಾಗಿ ರಾಜಕೀಯ ದಲಿತೊಡಗಿಸಿಕೊಂಡಿರುವ ನಟಿ ಉಮಾಶ್ರೀ ಅವರು ನಟನೆ ಮಾಡುವುದು ಸ್ವಲ್ಪ ಕಡಿಮೆ ಮಾಡಿದ್ದರು ಆದರೂ ಅವರು ಮಾಡಿರುವ ವಿಭಿನ್ನ ಪಾತ್ರಗಳು ಜನರ ಮನದಲ್ಲಿ ಅಚ್ಚಳಿಯದಂತೆ ಉಳಿದಿರುವುದು ಸತ್ಯ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...