ರೆಮೋ

ಮಜಾ ಟಾಕೀಸ್ ರೆಮೋ ಅವರ ಮಗಳು SSLC ನಲ್ಲಿ ಎಷ್ಟು ಅಂಕ ಪಡೆದಿದ್ದಾರೆ ಗೊತ್ತಾ? ರೆಮೋ ಭಾವುಕ

Uncategorized

ಎಲ್ಲರನ್ನು ನಕ್ಕು ನಗಿಸುವ ಕಾರ್ಯಕ್ರಮ ಮಜಾ ಟಾಕೀಸ್. ಒಂದು ಗಂಟೆ ಪ್ರಸಾರವಾಗುತ್ತಿದ್ದ ಈ ಶೋ ನೋಡುತ್ತಾ ಮನೆಮಂದಿಯೆಲ್ಲಾ ನಗುತ್ತಿದ್ದರು. ಸೃಜನ್ ಲೋಕೇಶ್ ಅವರ ಸಾರಥ್ಯದಲ್ಲಿ ಶುರುವಾದ ಈ ಶೋನಲ್ಲಿ, ತಮ್ಮದೇ ತಂಡದ ಜೊತೆ ಬರುತ್ತಿದ್ದವರು ರೆಮೋ. ಇವರ ಹಾಡುಗಳು, ತಮಾಷೆ ಇದೆಲ್ಲವನ್ನು ಜನರು ಬಹಳ ಇಷ್ಟಪಡುತ್ತಿದ್ದರು.

ಮಜಾ ಟಾಕೀಸ್ ರೆಮೋ ಅವರನ್ನು ಜನ ಬಹಳ ಇಷ್ಟಪಟ್ಟಿದ್ದಾರೆ. ಮಜಾ ಟಾಕೀಸ್ ನಲ್ಲಿ ರೆಮೋ ಅವರು ಹಾಡನ್ನು ಹಾಡುವುದರ ಜೊತೆಗೆ ಅದ್ಭುತವಾದ ಕಾಮಿಡಿಯನ್ನು ಕೂಡ ಮಾಡುತ್ತಾರೆ. ಇವರಿಗೆ ಸೋಶಿಯಲ್ ಮೀಡಿಯಾದಲ್ಲಿ ಸಾವಿರಾರು ಜನ ಅಭಿಮಾನಿಗಳಿದ್ದಾರೆ. ಯಾವಾಗಲೂ ಎಲ್ಲರನ್ನು ನಗಿಸುವ ರೆಮೋ ಅವರ ಮಗಳು 10ನೇ ತರಗತಿ ಪರೀಕ್ಷೆಯಲ್ಲಿ ಎಷ್ಟು ಅಂಕ ಗಳಿಸಿದ್ದಾರೆ ಗೊತ್ತಾ?

ರೆಮೋ ಎಂದಾಕ್ಷಣ ನೆನಪಾಗುವುದು ಅವರ ತಮಾಷೆ ಭರಿತ ಮಾತು ಮತ್ತು ಹಾಡುಗಳು. ರೆಮೋ ಅವರು ಒಂದು ಸಮಯದಲ್ಲಿ ಬಹಳಷ್ಟು ಹಣ ಕಾಸು ಇಟ್ಟುಕೊಂಡು ರಾಯಲ್ ಆಗಿ ಬದುಕಿದವರು. ಆದರೆ ಜೀವನ ಯಾವಾಗಲೂ ಒಂದೇ ರೀತಿ ಇರುವುದಿಲ್ಲ, ಕಷ್ಟಗಳು ಬಂದೆ ಬರುತ್ತವೆ. ಆ ರೀತಿ ಕಷ್ಟ ಬಂದಾಗಲೇ ನಮ್ಮವರು ಯಾರು ಎನ್ನುವುದು ಗೊತ್ತಾಗುತ್ತದೆ.

ರೆಮೋ ಅವರಿಗೂ ಹಾಗೆ ಕಷ್ಟ ಬಂದು ಒಂದೊಂದು ರೂಪಾಯಿಗೂ ಕಷ್ಟ ಪಡುವ ಸಂದರ್ಭ ಎದುರಾಗಿತ್ತು. ಆ ಸಮಯದಲ್ಲಿ ರೆಮೋ ಅವರ್ ಜೊತೆ ಯಾರು ಇರಲಿಲ್ಲ. ಅವರ ಮಗಳು ಮಾತ್ರ ಇದ್ದರು. ರೆಮೋ ಅವರು ಸಿಂಗಲ್ ಪೇರೆಂಟ್ ಆಗಿದ್ದಾರೆ. ಕಾರ್ ನಲ್ಲಿ ಓಡಾಡುತ್ತಿದ್ದ ರೆಮೋ ಅವರು ಒಂದು ಸಮಯದಲ್ಲಿ ಎಲ್ಲವನ್ನಿ ಕಳೆದುಕೊಂಡು ಸ್ಕೂಟರ್ ನಲ್ಲಿ ಓಡಾಡುವ ಪರಿಸ್ಥಿತಿ ಬರುತ್ತದೆ, ಆಗ ಜನ ಅವರನ್ನು ನೋಡುವ ದೃಷ್ಟಿಯೇ ಬದಲಾಯಿತು.

ಆಗ ಜೀವನದ ಸತ್ಯಗಳು ರೆಮೋ ಅವರಿಗೆ ಅರ್ಥವಾಗುತ್ತಾ ಹೋಯಿತು. ಆ ಸಮಯದಲ್ಲಿ ಮಿಮಿಕ್ರಿ ದಯಾನಂದ್ ಅವರು ಶೋಗಳಲ್ಲಿ ಹಾಡುವ ಕೆಲಸ, ಮಿಮಿಕ್ರಿ ಮಾಡುವ ಕೆಲಸವನ್ನು ರೆಮೋ ಅವರಿಗೆ ಕೊಡಿಸಿ, ಪೇಮೆಂಟ್ ಸಹ ಕೊಡಿಸುತ್ತಿದ್ದರು. ಅದೆಲ್ಲವೂ ರೆಮೋ ಅವರಿಗೆ ತುಂಬಾ ಸಹಾಯ ಮಾಡಿದೆ. ನಂತರ ಸಹಾಯಕ್ಕೆ ಬಂದವರು ಸೃಜನ್ ಲೋಕೇಶ್.

ರೆಮೋ ಅವರ ಪರಿಸ್ಥಿತಿ ಬಗ್ಗೆ ಸೃಜನ್ ಅವರಿಗೆ ತಿಳಿದಿತ್ತು, ಹಾಗಾಗಿ ತಮ್ಮ ಬ್ಯಾನರ್ ನಲ್ಲಿ ತಯಾರಾಗುತ್ತಿದ್ದ ಸೀರಿಯಲ್ ನಲ್ಲಿ ಕೆಲಸ ಮಾಡುವ ಅವಕಾಶ ಕೊಟ್ಟು, ಸಹಾಯ ಆಗುವ ಹಾಗೆ ಮಾಡಿದ್ದರು ಸೃಜನ್. ಇದನ್ನು ರೆಮೋ ಅವರು ಮರೆತಿಲ್ಲ. ಸೀರಿಯಲ್ ಮತ್ತು ಮಜಾ ಟಾಕೀಸ್ ಕಾರ್ಯಕ್ರಮ ನೀಡಿ, ರೆಮೋ ಸಹಾಯಕ್ಕೆ ನಿಂತರು ಸೃಜನ್.

ಮಜಾ ಟಾಕೀಸ್ ಸೆಟ್ ನಲ್ಲಿ ಮನಸ್ಸಿನ ನೋವು ತಡೆಯಲಾಗದೆ ರೆಮೋ ಅಳಲು ಶುರು ಮಾಡಿದಾಗ, ಶ್ವೇತಾ ಚೆಂಗಪ್ಪ, ಅಪರ್ಣಾ ಎಲ್ಲರೂ ಬಂದು ರೆಮೋ ಅವರನ್ನು ಸಮಾಧಾನ ಮಾಡಿದರು. ಆಗ ಸೃಜನ್ ಅವರು ಸಹ ಬಂದು, ನಾನು ನಿನ್ನ ಅಣ್ಣ ಇದ್ದ ಹಾಗೆ ಏನೇ ತೊಂದ್ರೆ ಇದ್ರು ನನ್ ಹತ್ರ ಹೇಳ್ಕೊ ಅಂದಿದ್ರಂತೆ ಸೃಜನ್. ಹಾಗೆಯೇ ರೆಮೋ ಅವರಿಗೆ ಕೋವಿಡ್ ಪಾಸಿಟಿವ್ ಆಗಿ ಆಸ್ಪತ್ರೆಯಲ್ಲಿ ಇದ್ದಾಗ ಸಹ ಅವರ ಕಷ್ಟಕ್ಕೆ ಸಹಾಯವಾಗಿ ಯಾರು ಬರಲಿಲ್ಲ.

ಜೊತೆಗೆ ಇದ್ದಿದ್ದು ಅವರ ಮಗಳು ಮಾತ್ರ, ಇಬ್ಬರು ಒಬ್ಬರಿಗೊಬ್ಬರು ಇದ್ದರು. ಮಗಳನ್ನು ತುಂಬಾ ಇಷ್ಟ ಪಡುವ ರೆಮೋ ಅವರು ಮಗಳಿಗೆ ಏನಿಷ್ಟ ಅದನ್ನು ಮಾಡಲಿ, ನಾನು ಸಪೋರ್ಟ್ ಮಾಡುತ್ತೇನೆ ಹಾಗೆಯೇ ಶಿಕ್ಷಣ ಸಹ ಬಹಳ ಮುಖ್ಯ ಅದನ್ನು ಸಹ ಮುಂದುವರೆಸಲಿ ಎನ್ನುತ್ತಾರೆ ರೆಮೋ.

ಈ ವರ್ಷ ರೆಮೋ ಅವರ ಮಗಳು ಮೇದಿನಿ, 10ನೇ ತರಗತಿ ಪರೀಕ್ಷೆ ಬರೆದಿದ್ದು ರಿಸಲ್ಟ್ ಬಂದಿದೆ, ರೆಮೋ ಅವರ ಮಗಳು 10ನೇ ತರಗತಿಯಾವ್ 87% ಸ್ಕೋರ್ ಮಾಡಿದ್ದು, ರೆಮೋ ಅವರು ಮಗಳ ಬಗ್ಗೆ ಬಹಳ ಸಂತೋಷದಿಂದ ಇನ್ಸ್ಟಾಗ್ರಾಮ್ ನಲ್ಲಿ ಹೆಮ್ಮೆಯಿಂದ ಕೆಲವು ಸಾಲುಗಳನ್ನು ಬರೆದಿದ್ದಾರೆ.

“ನನ್ನ ಪ್ರೀತಿಯ ಮಗಳು. ನನ್ನ ವಜ್ರ. ಹತ್ತನೇ ತರಗತಿಯ ಪರೀಕ್ಷೆಯಲ್ಲಿ 87% ಪಡೆದು ನಾನು ಹೆಮ್ಮೆ ಪಡುವಂತೆ ಖಂಡಿತ ಮಾಡಿದ್ದೀಯಾ. ನನ್ನ ಪ್ರಪಂಚ ನೀನು. ಯಾರ ಜೀವನವೂ ಹೂವಿನ ಹಾದಿಯಲ್ಲ. ನಮ್ಮದೂ ಕೂಡ ಅದೇ ರೀತಿ. ನಾವು ಪಟ್ಟ ಎಲ್ಲಾ ಕಷ್ಟಕ್ಕೂ ಪ್ರತಿಫಲ ಈಗ ಸಿಕ್ಕಿದೆ. ನಿನ್ನ ಯಶಸ್ಸಿಗೆ ಮೊದಲ ಹೆಜ್ಜೆ ಇದು. ಮುಂದೆ ಕೂಡ ಇದೇ ರೀತಿ ಎತ್ತರಕ್ಕೆ ಸಾಗುತ್ತಿರು. ನಿನ್ನ ಎಲ್ಲಾ ಕನಸುಗಳು ಈಡೇರಲಿ..” ಎಂದು ಬರೆದುಕೊಂಡಿದ್ದಾರೆ ರೆಮೋ. ಮುಂದೆ ತಮ್ಮ ಮಗಳಿಗೆ ಒಳ್ಳೆಯ ಭವಿಷ್ಯ ರೂಪಿಸಿ ಕೊಡುವ ಕನಸು ಹೊಂದಿದ್ದಾರೆ.

ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...

Leave a Reply

Your email address will not be published.