shrujan

ಕಿರುತೆರೆ ಬಿಟ್ಟು ಹೊಸ ಕೆಲಸ ಆರಂಭಿಸಿದ ನಟ ಸೃಜನ್ ಲೋಕೇಶ್.. ಕಾರಣವೇನು ಗೊತ್ತಾ..

Uncategorized

ಸೃಜನ್ ಲೋಕೇಶ್.. ಕನ್ನಡ ಕಿರುತೆರೆ ಕಂಡ ಪ್ರತಿಭಾನ್ವಿತ ಕಲಾವಿದ ಅಥವಾ ನಿರೂಪಕ ಅಥವಾ ನಿರ್ಮಾಪಕ ಎನ್ನಬಹುದು.. ಕಿರುತೆರೆಯಲ್ಲಿ ತಮ್ಮದೇ ಆಲೋಚನೆಯ ಸಾಕಷ್ಟು ಶೋಗಳನ್ನು ಮಾಡಿ ಯಶಸ್ವಿಯೂ ಆದ ನಟ ಸೃಜನ್ ಲೋಕೇಶ್ ಅವರು ಇದೀಗ ಕಿರುತೆರೆ ಬಿಟ್ಟು ಹೊಸ ಕೆಲಸ ಆರಂಭಿಸಿದ್ದಾರೆ.. ಇನ್ನು ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ನಿಮ್ಮೆಲ್ಲರ ಹಾರೈಕೆ ಇರಲಿ ಎಂದು ಮನವಿ ಮಾಡಿಕೊಂಡಿದ್ದಾರೆ..

ಹೌದು ಕನ್ನಡ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳು ಆರಂಭವಾಗುತ್ತಿದ್ದ ಸಮಯದಿಂದಲೂ ಒಂದಲ್ಲಾ ಒಂದು ಶೋ ಮೂಲಕ ಹೆಸರು ಮಾಡಿದ್ದ ಸೃಜನ್ ಅವರು ಮಕ್ಕಳ ಚೋಟಾ ಚಾಂಪಿಯನ್ ಶೋ.. ಮಜಾ ವಿತ್ ಸೃಜಾ.. ಮಜಾ ಟಾಕೀಸ್.. ಹೀಗೆ ಸಾಕಷ್ಟು ಶೋಗಳನ್ನು ನಿರೂಪಣೆ ಮಾಡಿದ್ದಲ್ಲದೇ ನನ್ನಮ್ಮ ಸೂಪರ್ ಸ್ಟಾರ್.. ರಾಜಾ ರಾಣಿ ಡ್ಯಾನ್ಸಿಂಗ್ ಚಾಂಪಿಯನ್ ಸೇರಿದಂತೆ ಬಹಳಷ್ಟು ಶೋಗಳನ್ನು ತಮ್ಮದೇ ಆದ ಲೋಕೇಶ್ ಪ್ರೊಡಕ್ಷನ್ ಮೂಲಕ ನಿರ್ಮಾಣ ಮಾಡಿ ನಿರ್ಮಾಪಕನಾಗಿಯೂ ಸೈ ಎನಿಸಿಕೊಂಡರು.. ಇನ್ನು ಈ ನಡುವೆ ಸಿನಿಮಾಗಳಲ್ಲಿಯೂ ಅಭಿನಯಿಸುತ್ತಿದ್ದ ಸೃಜನ್ ಅವರು ದರ್ಶನ್ ಅವರ ನವಗ್ರಹ ಪೊರ್ಕಿ ಜಗ್ಗುದಾದ ಸೇರಿದಂತೆ ಕೆಲವೊಂದು ಸಿನಿಮಾಗಳಲ್ಲಿ ಸಹನಟನಾಗಿ ಅಭಿನಯಿಸಿ ಗುರುತಿಸಿಕೊಂಡರು.. ಆ ಬಳಿಕ ತಾವೇ ಹೀರೋ ಆಗಿ ಅಭಿನಯಿಸಿದ ಆನೆ ಪಟಾಕಿ ಎಲ್ಲಿದ್ದೆ ಇಲ್ಲಿ ತನಕ ಸಿನಿಮಾಗಳು ನಿರೀಕ್ಷೆ ಮಾಡಿದಷ್ಟು ಯಶಸ್ಸು ನೀಡಲಿಲ್ಲ.. ಆನಂತರ ಸಿನಿಮಾ ಬಿಟ್ಟು ಕಿರುತೆರೆಯಲ್ಲಿಯೇ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು..

ಮಜಾ ಟಾಕೀಸ್ ನನ್ನಮ್ಮ ಸೂಪರ್ ಸ್ಟಾರ್ ರಾಜಾರಾಣಿ ಡ್ಯಾನ್ಸಿಂಗ್ ಚಾಂಪಿಯನ್ ಶೋಗಳನ್ನು ನಿರ್ಮಾಣ ಮಾಡಿ ತಾವೇ ಜಡ್ಜ್ ಆಗಿ ಕೂಡ ಕಾಣಿಸಿಕೊಂಡಿದ್ದರು.. ಇನ್ನು ಇದರ ಜೊತೆಗೆ ನಟಿ‌ ಮೇಘನಾ ರಾಜ್ ಅವರನ್ನೂ ಸಹ ಕಿರುತೆರೆಗೆ ಕರೆತಂದು ಅವರ ವೃತ್ತಿ ಬದುಕಿಗೆ ಹೊಸ ಆರಂಭ ನೀಡಿದರು.. ಇನ್ನು ಇದೀಗ ಕಿರುತೆರೆ ಶೋಗಳ ಜೊತೆಗೆ ಹೊಸ ಕೆಲಸವನ್ನು ಆರಂಭಿಸುತ್ತಿದ್ದಾರೆ..

ಹೌದು ಇಷ್ಟು ದಿನಗಳ ಕಾಲ ನಟನಾಗಿ ಇದ್ದ ಸೃಜನ್ ಲೋಕೇಶ್ ಅವರು ಇನ್ನು ಮುಂದೆ ನಿರ್ದೇಶಕನಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.. ಹೌದು ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಹೊಸ ಸಿನಿಮಾಗೆ ಸೃಜನ್ ಲೋಕೇಶ್ ಅವರೇ ನಿರ್ದೇಶಕರಾಗಿದ್ದು ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಖುದ್ದು ಸೃಜನ್ ಲೋಕೇಶ್ ಅವರೇ ತಿಳಿಸಿದ್ದಾರೆ..

ಸಂದೇಶ್ ನಾಗರಾಜ್ ಅವರೊಟ್ಟಿಗೆ ಚಾಮುಂಡಿ ಬೆಟ್ಟದಲ್ಲಿ ಒಟ್ಟಿಗೆ ಇರುವ ಫೋಟೋ ಹಂಚಿಕೊಂಡು “ಹಿರಿಯ ನಿರ್ಮಾಪಕರಾದ “ಸಂದೇಶ ನಾಗರಾಜ್” ಅವರ ಆಶೀರ್ವಾದದೊಂದಿಗೆ ಹೊಸ ಪ್ರಯತ್ನಕ್ಕೆ ಶುಭಾರಂಭ. “ಲೋಕೇಶ್ ಪ್ರೊಡಕ್ಷನ್ಸ್” ಹಾಗೂ “ಸಂದೇಶ ಪ್ರೊಡಕ್ಷನ್ಸ್” ಸಂಸ್ಥೆ ಅಡಿಯಲ್ಲಿ ಹೊಸ ಚಿತ್ರ ನಿರ್ಮಾಣ,ಮತ್ತಷ್ಟು ವಿವರಗಳು ಅತಿ ಶೀಘ್ರದಲ್ಲಿ. ನಿರ್ದೇಶಕನಾಗಿ ನನ್ನ ಮೊದಲ ಪ್ರಯತ್ನ ನಿಮ್ಮ ಹಾರೈಕೆ ಸದಾ ನಮ್ಮ ಮೇಲೆ ಇರಲಿ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ..

ನಿರ್ದೇಶಕನಾಗಿ ಹೊಸ ಆರಂಭ ಮಾಡುತ್ತಿರುವ ಸೃಜನ್ ಅವರಿಗೆ ಅಭಿಮಾನಿಗಳು ಶುಭ ಹಾರೈಸಿದ್ದು ಸೃಜನ್ ಅವರ ನಿರ್ದೇಶನದಲ್ಲಿ ತಯಾರಾಗುತ್ತಿರುವ ಹೊಸ ಸಿನಿಮಾಗೆ ನಾಯಕ ಯಾರು ಎಂಬ ಕುತೂಹಲ ಮೂಡಿದ್ದು ಇನ್ನು ಕೆಲ ದಿನಗಳಲ್ಲಿ ಉತ್ತರ ದೊರೆಯಬಹುದಾಗಿದೆ..

ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...