ಅದ್ಭುತವಾಗಿ ಮೂಡಿಬಂದ ಬೊಂಬೆ ಆಟವಯ್ಯಾ…ಹಾಡು – ರೇವಣಸಿದ್ಧ ಹಾಗೂ ಶಿವಾನಿಗೆ ಮೆಚ್ಚುಗೆಯ ಮಹಾಪೂರ

TODAY NEWS / ಕನ್ನಡ ಸುದ್ದಿಗಳು

ಸರಿಗಮಪ ಇದು ಝೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ, ಸರಿಗಮಪ ಲಿಟಲ್ ಚಾಂಪ್ಸ್ ಮತ್ತು ಸರಿಗಮಪ ಚಾಂಪಿಯನ್ಸ್ ಎನ್ನುವ ಎರಡು ಸರಿಗಮಪ ಸಂಗೀತ ಕಾರ್ಯಕ್ರಮವು ಜೀ ಕನ್ನಡ ವಾಹಿನಿಯ ಫೇಮಸ್ ಕಾರ್ಯಕ್ರಮಗಳು. ಈ ಕಾರ್ಯಕ್ರಮಕ್ಕೆ ಕರ್ನಾಟಕದಾದ್ಯಂತ ಅಭಿಮಾನಿಗಳು ಇದ್ದಾರೆ. ವರ್ಷಕ್ಕೆ ಒಂದರಂತೆ ಏರ್ಪಡುವ ಈ ಕಾರ್ಯಕ್ರಮ ಇದುವರೆಗೆ ತನ್ನ 19 ಆವೃತ್ತಿಗಳನ್ನು ಸಕ್ಸಸ್ಫುಲ್ ಆಗಿ ನಡೆಸಿದೆ.

ಈಗ 19ನೇ ಸೀಸನ್ ನಲ್ಲಿ ಕೂಡ ಕರ್ನಾಟಕದ ನಾನಾ ಕಡೆ ಸಂಚರಿಸಿ ಮೂರು ತಂಡಗಳಾಗಿ ಹಲವು ಪ್ರತಿಭೆಗಳನ್ನು ಹೆಕ್ಕಿ ತಂದಿದ್ದಾರೆ. ಈ ಕಾರ್ಯಕ್ರಮಕ್ಕೆ ಮಹಾಗುರುಗಳಾದ ಹಂಸಲೇಖರವರು ತೀರ್ಪುಗಾರರಾಗಿದ್ದು ಇವರಿಗೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ಗಾಯಕ ವಿಜಯ ಪ್ರಕಾಶ್ ಅವರ ಜೊತೆಯಾಗಿದ್ದಾರೆ. ಅನುಶ್ರೀ ಅವರ ಆಂಕರಿಂಗ್ ಪ್ರತಿ ಬಾರಿಯಂತೆ ಈ ಬಾರಿ ಕೂಡ ಇದ್ದು ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿದೆ.

ಅಲ್ಲದೆ ಕನ್ನಡದ ಪ್ರಸಿದ್ಧ ಕಾಯಕರುಗಳಾದ ಇಂದು ನಾಗರಾಜ್, ಹೇಮಂತ್, ಅನುರಾಧ ಭಟ್, ನಂದಿತಾ ಅವರು ಸೇರಿದಂತೆ ಹಲವರು ಸ್ಪರ್ಧಿಗಳಿಗೆ ಮೆಂಟರಿಂಗ್ ಮಾಡುತ್ತಿದ್ದು ಜ್ಯೂರಿ ಮೆಂಬರ್ಸ್ ಕೂಡ ಇದ್ದಾರೆ. ಇವರೆಲ್ಲರಿಂದ ಸ್ವರ ಸಂಸ್ಥಾನದಂತೆ ಸೆಟ್ ಕಂಗೊಳಿಸುತ್ತಿದ್ದು ಪ್ರತಿಯೊಬ್ಬ ಕಂಟೆಸ್ಟೆಂಟ್ ನ ಹಾಡುಗಾರಿಕೆ ಇದಕ್ಕೆ ಇನ್ನಷ್ಟು ಕಳೆಯನ್ನು ತರುತ್ತಿದೆ.

ಈಗಾಗಲೇ ಮೇಘಾ ಆಡಿಶನ್ ಮತ್ತು ಜನಪದ ರೌಂಡ್ ಹಾಗೂ ಶಿವಣ್ಣ ಅವರ ವೇದ ಸಿನಿಮಾ ರಿಲೀಸ್ ಪ್ರಯುಕ್ತ ಶಿವಣ್ಣನ ಸ್ಪೆಷಲ್ ರೌಂಡ್ ಎಲ್ಲವು ಕೂಡ ಮುಗಿದಿದ್ದು ಈ ವಾರ ನಾನಾ ನೀನಾ ರೌಂಡ್ ನಡೆಯುತ್ತಿದೆ. ಈ ವಾರದ ನಾನಾ ನೀನಾ ಎನ್ನುವ ರೌಂಡಿನಲ್ಲಿ ಕಂಟೆಸ್ಟೆಂಟ್ಗಳು ಭಾಗಿಯಾಗಿರುವ ಕುರಿತು ವಿಡಿಯೋಗಳು ಜೀ ಕನ್ನಡ ವಾಹಿನಿಯ ಅಫಿಷಿಯಲ್ ಸೋಶಿಯಲ್ ಮೀಡಿಯಾ ಪೇಜ್ ಗಳಲ್ಲಿ ರಿಲೀಸ್ ಆಗಿದ್ದು ಎಲ್ಲರಿಗೂ ಕುತೂಹಲ ಹೆಚ್ಚಿಸಿದೆ.

ಕನ್ನಡದ ಕಲಾ ಕಂಠೀರವ ಕಂಚಿನ ಕಂಠ ಹೊಂದಿದ್ದ ಮೇರು ನಟ ಡಾಕ್ಟರ್ ರಾಜಕುಮಾರ್ ಅವರು ಹಾಡಿರುವ ಮತ್ತು ಅಭಿನಯಿಸಿರುವ ಶ್ರುತಿ ಸೇರಿದಾಗ ಸಿನಿಮಾದ ಬೊಂಬೆ ಆಟವಯ್ಯ ಎನ್ನುವ ಹಾಡನ್ನು ಇಬ್ಬರು ಸ್ಪರ್ಧಿಗಳು ಆಯ್ಕೆ ಮಾಡಿಕೊಂಡು ಬಹಳ ಅದ್ಭುತವಾಗಿ ಪರ್ಫಾರ್ಮೆನ್ಸ್ ಮಾಡಿದ್ದಾರೆ, ಇದು ನೋಡುಗರನ್ನು ಆಕರ್ಷಿಸಿದ್ದು ತೀರ್ಪುಗಾರರು ಕೂಡ ಇದನ್ನು ಸಾಕಷ್ಟು ಮೆಚ್ಚಿಕೊಂಡರು.

ವಿಶೇಷ ಚೇ’ ತನರಾಗಿರುವ ಕುಮಾರ ರೇವಣ್ಣ ಸಿದ್ದ ಎನ್ನುವ ಹದಿನಾಲ್ಕು ವರ್ಷದ ಸೊಲ್ಲಾಪುರದ ಪುಟ್ಟ ಬಾಲಕ ಮತ್ತು ಮೈಸೂರಿನ 15 ವರ್ಷದ ಶಿವಾನಿ ನವೀನ್ ಕೊಪ್ಪ ಅವರು ಜುಗಲ್ ಬಂದಿ ಆಗಿ ಈ ಹಾಡನ್ನು ಹಾಡಿದ್ದಾರೆ. ಇಬ್ಬರೂ ಕೂಡ ಈಗಾಗಲೇ ಸೋಲೊ ಪರ್ಫಾರ್ಮೆನ್ಸ್ ಕೊಟ್ಟು ಮೆಚ್ಚುಗೆ ಗಳಿಸಿದ್ದಾರೆ.

ಅದರಲ್ಲೂ ಶಿವಾನಿಯವರು ಕಳೆದ ವಾರ ಹಾಡಿದ ವೇದ ಸಿನಿಮಾದ ಯಾವನೋ ಇವನು ಗಿಲ್ಲಕ್ಕೋ ಹಾಡನ್ನು ಕೇಳಿ ಹಲವು ಮಂದಿ ಇವರ ಗಾಯನಕ್ಕೆ ಫ್ಯಾನ್ ಆಗಿದ್ದಾರೆ. ಇದೀಗ ಮತ್ತೊಮ್ಮೆ ಇವರಿಬ್ಬರ ಕಾಂಬಿನೇಷನ್ ಬೊಂಬೆ ಆಟವಯ್ಯ ಹಾಡು ಇನ್ನಷ್ಟು ಜನರ ಮನ ಗೆಲ್ಲುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಈಗ ಹರಿದಾಡುತ್ತಿರುವ ಕ್ಲಿಪ್ಪಿಂಗ್ ಗಳಲ್ಲಿ ವಿಜಯ ಪ್ರಕಾಶ್, ಅರ್ಜುನ್ ಜನ್ಯ ಎಲ್ಲರೂ ಸಹ ಇವರಿಬ್ಬರ ಹಾಡನ್ನು ಮೆಚ್ಚಿ ಮಾತನಾಡಿರುವುದು ಮತ್ತು ಹಂಸಲೇಖ ಅವರು ಚಪ್ಪಾಳೆ ಹೊಡೆದು ಮೆಚ್ಚುಗೆ ವ್ಯಕ್ತಪಡಿಸಿರುವುದು ಸಹ ತಿಳಿದು ಬರುತ್ತದೆ. ಇದನ್ನು ನೋಡಿದ ಪ್ರೇಕ್ಷಕರು ಪ್ರತಿ ವಾರ ಈ ಕಾರ್ಯಕ್ರಮ ಟಿವಿಯಲ್ಲಿ ಪ್ರಸಾರ ಆಗುವುದನ್ನೇ ಕಾತುರದಿಂದ ಕಾಯುತ್ತಿರುತ್ತಾರೆ.

ಆ ವಿಡಿಯೊ ಕೆಳಗಿದೆ ನೋಡಿ….
ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...