ಶಿಲ್ಪಾ ಶೆಟ್ಟಿಯ ವಿಚಿತ್ರ ಉಡುಪು ನೋಡಿ ಕಸಿವಿಸಿಗೊಂಡ ಕ್ಯಾಮರಾ ಮ್ಯಾನ್! ಫೋಟೋ ತೆಗೆಯಬೇಡಿ ಎಂದು ಓಡಿದ ನಟಿ, ವಿಡಿಯೋ ಸಿಕ್ಕಾಪಟ್ಟೆ ವೈರಲ್!!

TODAY NEWS / ಕನ್ನಡ ಸುದ್ದಿಗಳು

ಇತ್ತೀಚಿಗೆ ಬಾಲಿವುಡ್ ಯಾವ ಸಿನಿಮಾಗಳು ಅಷ್ಟಾಗಿ ಗೆಲ್ಲುತ್ತಿಲ್ಲ. ಕನ್ನಡ ಸಿನಿಮಾಗಳಿಗೆ ಹೋಲಿಸಿದರೆ ಬಹುತೇಕ ಬಾಲಿವುಡ್ ನ ಎಲ್ಲಾ ಸಿನಿಮಾಗಳು ನೆಲಕಚ್ಚಿವೆ. ಸೌತ್ ಸಿನಿಮಾ ಯಶಸ್ಸನ್ನು ನೋಡಿ ಬಾಲಿವುಡ್ ಆತಂಕಗೊಂಡಿರುವುದಂತೂ ಸುಳ್ಳಲ್ಲ. ಹಾಗಾಗಿ ಇತ್ತೀಚಿಗೆ ಸಿನಿಮಾದಲ್ಲಿ ಹೆಚ್ಚು ಕಾಣಿಸಿಕೊಳ್ಳುವುದಕ್ಕೆ ಆಗ್ತಾ ಇಲ್ಲ ಅಂತ ಬಾಲಿವುಡ್ ಸೆಲಿಬ್ರೇಟಿಗಳು ಇತರ ವಿಷಯಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಅದರಲ್ಲಿ ಜನರ ಗಮನ ಸೆಳೆಯುವಂತಹ ಫ್ಯಾಷನ್ ಕೂಡ ಒಂದು.

ಹೌದು ಇತ್ತೀಚಿಗೆ ಬಾಲಿವುಡ್ ಸ್ಟಾರ್ ನಟಿಯರು ಸಿನಿಮಾಗಳಿಗಿಂತ ಹೆಚ್ಚು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ. ಜೊತೆಗೆ ಕೆಲವು ಫ್ಯಾಷನ್ ಕಾರ್ಯಕ್ರಮದಲ್ಲಿಯೂ ಕೂಡ ಪಾಲ್ಗೊಳ್ಳುತ್ತಾರೆ. ಹೀಗೆ ಶಿಲ್ಪಾ ಶೆಟ್ಟಿ ಕಾರ್ಯಕ್ರಮವೊಂದಕ್ಕೆ ಹೋಗಿದ್ದು ಅವರ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. ಇದಕ್ಕೆ ಮುಖ್ಯವಾದ ಕಾರಣ ಅವರು ಧರಿಸಿದ್ದ ಡ್ರೆಸ್. ವಿಶೇಷವಾಗಿ ಜೀನ್ಸ್ ಪ್ಯಾಂಟ್ ಸ್ಟಿಚ್ ಮಾಡಿಸಲಾಗಿತ್ತು. ಸೂಪರ್ ಮ್ಯಾನ್ ನಂತೆಯೂ ಕಾಣಿಸುವ ಈ ಧಿರಿಸು ಎಲ್ಲರಿಗೂ ಅಚ್ಚರಿ ನೀಡಿದೆ.

ನಟಿ ಶಿಲ್ಪ ಶೆಟ್ಟಿ ಸಾಕಷ್ಟು ಹೊಸ ಬಗೆಯ ಫ್ಯಾಷನ್ ಮಾಡುತ್ತಾರೆ. ಈವರೆಗೆ ಅವರು ಧರಿಸಿದಂತಹ ಬಟ್ಟೆಗಳು ತುಂಬಾನೇ ಯೂನಿಕ್ ಆಗಿ ಇದ್ದವು. ಈ ಬಾರಿಯೂ ಅವರು ಧರಿಸಿರುವ ಡ್ರೆಸ್ ಯುನಿಕ್ ಆಗಿದೆ ಆದರೆ ಇದನ್ನ ನೋಡಿ ಸಾಕಷ್ಟು ಜನ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಉರ್ಫಿ ತರ ನೀವು ಯಾಕೆ ಅಸಂಬದ್ಧ ಫ್ಯಾಷನ್ ಮಾಡುತ್ತಿದ್ದೀರಾ ಅಂತ ಜನ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಹೀಗೆ ವಿಶೇಷ ಫ್ಯಾಷನ್ ಮಾಡುವ ಯಾವ ಬಾಲಿವುಡ್ ನಟಿಯರು ಜನರ ಮಾತಿಗೆ ತಲೆಕೆಡಿಸಿಕೊಳ್ಳುವುದಿಲ್ಲ.

ಬದಲಿಗೆ ಇನ್ನಷ್ಟು ಫ್ಯಾಶನೆಬಲ್ ಆಗಿರುವುದಕ್ಕೆ ಟ್ರೈ ಮಾಡುತ್ತಾರೆ. ಇತ್ತೀಚಿಗೆ ಶಿಲ್ಪ ಶೆಟ್ಟಿ ಅವರ ಈ ಹೊಸ ಡ್ರೆಸ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕರಾವಳಿ ಮೂಲದ ಶಿಲ್ಪ ಶೆಟ್ಟಿ ಬಾಲಿವುಡ್ ನಲ್ಲಿ ಪ್ರಸಿದ್ಧ ನಟಿ ಜೊತೆಗೆ ಅವರು ಯೋಗ ಮಾಡುವುದರ ಮೂಲಕ ಹೆಚ್ಚು ಫೇಮಸ್ ಆಗಿದ್ದಾರೆ. ವರ್ಷ ಕಳೆದಂತೆ ಇನ್ನಷ್ಟು ಯಂಗ್ ಆಗಿ ಕಾಣುವ ಶಿಲ್ಪಾ ಶೆಟ್ಟಿ.

ಅವರ ಸೌಂದರ್ಯದ ಗುಟ್ಟು ಅವರ ಯೋಗ ಹಾಗೂ ಫಿಟ್ನೆಸ್ ಗಾಗಿ ತೆಗೆದುಕೊಳ್ಳುವ ಮುಂಜಾಗ್ರತೆಗಳು ಎಂದರೆ ತಪ್ಪಾಗಲಿಕ್ಕಿಲ್ಲ. ಸಿನಿಮಾದಲ್ಲಿ ಅಭಿನಯಿಸುವುದರ ಜೊತೆಗೆ ಡ್ಯಾನ್ಸಿಂಗ್ ಶೋ ತೀರ್ಪುಗಾರರಾಗಿಯು ಕೂಡ ಶಿಲ್ಪ ಶೆಟ್ಟಿ ಕಾಣಿಸಿಕೊಳ್ಳುತ್ತಾರೆ. ಹಿಂದಿಯಲ್ಲಿ ಮಾತ್ರವಲ್ಲದೆ ತಮಿಳು ತೆಲುಗು ಹಾಗೆ ಕನ್ನಡದಲ್ಲಿಯೂ ಕೂಡ ಅಭಿನಯಿಸಿದ್ದಾರೆ ಶಿಲ್ಪಾ ಶೆಟ್ಟಿ. ರವಿಚಂದ್ರನ್ ಅವರ ಜೊತೆ ಪ್ರೀತ್ಸೋದು ತಪ್ಪಾ, ಒಂದಾಗೋಣ ಬಾ, ಆಟೋ ಶಂಕರ್ ಮೊದಲಾದ ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡಿಗರಿಗೂ ಕೂಡ ಅಚ್ಚುಮೆಚ್ಚಿನ ನಟಿ ಎನಿಸಿದ್ದಾರೆ.

ರಾಜಸ್ಥಾನ ರಾಯಲ್ಸ್ ತಂಡದ ಒಡತಿ ಕೂಡ ಆಗಿದ್ದ ಶಿಲ್ಪ ಶೆಟ್ಟಿ ಅವರು ಉದ್ಯಮಿ ರಾಜ್ ಕುಂದ್ರ ಅವರನ್ನ ಮದುವೆ ಆಗಿದ್ದಾರೆ. ಅವರ ವೈವಾಹಿಕ ಜೀವನದ ಬಗ್ಗೆ ಹಾಗೂ ರಾಜ್ ಕುಂದ್ರಾ ಕೇಸ್ ಬಗ್ಗೆ ನಿಮಗೆಲ್ಲ ಗೊತ್ತೇ ಇದೆ. ಆದರೆ ಇವೆಲ್ಲದರಿಂದ ಹೊರ ಬಂದು ಶಿಲ್ಪಶೆಟ್ಟಿ ಮಾತ್ರ ತಮ್ಮ ವೃತ್ತಿ ಜೀವನದಲ್ಲಿ ಇನ್ನಷ್ಟು ಹೆಚ್ಚು ತೊಡಗಿಕೊಂಡಿದ್ದಾರೆ. ಶಿಲ್ಪ ಶೆಟ್ಟಿ ನಿಮಗೂ ಇಷ್ಟವಾಗಿದ್ದರೆ ಅವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ಕಾಮೆಂಟ್ ಮಾಡುವುದರ ಮೂಲಕ ತಿಳಿಸಿ.

ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...