ರೀಲ್ಸ್ ಗಾಗಿ ಈ ಸೀರೆಯುಟ್ಟ ನೀರೆ ನಡುರಸ್ತೆಯಲ್ಲಿ ಮಾಡಿದ ಕೆಲಸ ಕಂಡ್ರೆ ಅಚ್ಚರಿಯಲ್ಲ ಶಾಕ್ ಆಗ್ತೀರಾ!

TODAY NEWS / ಕನ್ನಡ ಸುದ್ದಿಗಳು

ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆಯನ್ನು ಪಡೆದುಕೊಳ್ಳಲು ಬಹಳಷ್ಟು ಜನರು ಅವಲಂಬಿಸಿರುವುದು ಸೋಶಿಯಲ್ ಮೀಡಿಯಾಗಳ ಮೇಲೆ. ಏಕೆಂದರೆ ಈ ಮಾದ್ಯಮಗಳ ಮೂಲಕ ಬಹಳ ಬೇಗ ಜನಪ್ರಿಯತೆಯನ್ನು ಪಡೆಯಲು ಸಾಕಷ್ಟು ಅವಕಾಶಗಳು ಇವೆ. ಈಗಾಗಲೇ ಅನೇಕ ಪ್ರತಿಭಾವಂತರು ಸೆಲೆಬ್ರಿಟಿಗಳನ್ನು ಸಹಾ ಮೀರಿಸುವ ಸಂಖ್ಯೆಯಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಹಿಂಬಾಲಕರನ್ನು ಪಡೆದುಕೊಂಡು ಸದ್ದು, ಸುದ್ದಿಯಾಗಿದ್ದಾರೆ.

ಆದರೆ ಇನ್ನೂ ಕೆಲವರು ಹೇಗಾದರೂ ಮಾಡಿ ತಾವು ಸಹಾ ಸೋಶಿಯಲ್ ಮೀಡಿಯಾಗಳಲ್ಲಿ ಮಿಂಚಲೇ ಬೇಕು ಎನ್ನುವ ಕಾರಣದಿಂದ ನಾನಾ ಸರ್ಕಸ್ ಗಳನ್ನು ಮಾಡುತ್ತಾರೆ, ಊಹಿಸಲಾಗದಂತಹ ಕೆಲಸಗಳನ್ನು ಮಾಡಲು ಮುಂದಾಗಿ ಬಿಡುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈಗ ರೀಲ್ಸ್ ವೀಡಿಯೋಗಳ ಅಬ್ಬರ ಜೋರಾಗಿದೆ.

ಕೆಲವು ರೀಲ್ಸ್ ಗಳು ಕೆಲವೇ ಗಂಟೆಗಳಲ್ಲಿ ವೈರಲ್ ಆಗಿ ಲಕ್ಷಾಂತರ ಜನರ ವೀಕ್ಷಣೆಗಳನ್ನು ಪಡೆದುಕೊಂಡು, ಜನಪ್ರಿಯ ಆಗಿ ಬಿಡುತ್ತವೆ. ಆದ್ದರಿಂದಲೇ ಅನೇಕರು ಚಿತ್ರ ವಿಚಿತ್ರ ರೀಲ್ಸ್ ಗಳನ್ನು ಮಾಡಲು ತೊಡಗಿಸಿಕೊಂಡಿದ್ದಾರೆ. ಜನ ರೀಲ್ ವೀಡಿಯೋಗಳ ಮೂಲಕ ಬಹುಬೇಗ ಜನಪ್ರಿಯತೆಯನ್ನು ಪಡೆಯಬೇಕೆಂಬ ತವಕದಲ್ಲಿ ಏನೆಲ್ಲಾ ಮಾಡುತ್ತಿದ್ದಾರೆ ಎನ್ನುವುದು ವೈರಲ್ ವೀಡಿಯೋಗಳನ್ನು ನೋಡಿದಾಗ ತಿಳಿಯುತ್ತದೆ.

ರೀಲ್ಸ್ ಮಾಡುವ ಯಾವುದೇ ರಿಸ್ಕ್ ಮಾಡಲು ಸಹಾ ಹಿಂದೆ ಮುಂದೆ ನೋಡದ ಜನರೂ ನಮ್ಮ ನಡುವೆ ಇದ್ದಾರೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯೊಬ್ಬರು ಮಾಡಿರುವ ಡಾನ್ಸ್ ನ ವಿಡಿಯೋವೊಂದು ಭರ್ಜರಿ ವೈರಲ್ ಆಗುತ್ತಿದೆ. ಈ ಮಹಿಳೆ ರಸ್ತೆಯ ಟ್ರಾಫಿಕ್ ನಲ್ಲಿ ಡ್ಯಾನ್ಸ್ ಮಾಡಿದ್ದಾರೆ.

ಶಾಕಿಂಗ್ ಏನೆಂದರೆ ಅವರು ಯಾವುದೇ ಭಯ ಅಥವಾ ಹಿಂಜರಿಕೆ ಎನ್ನುವುದು ಇಲ್ಲದೇ ಟ್ರಾಫಿಕ್ ಪೊಲೀಸ್ ಅಧಿಕಾರಿಯ ಮುಂದೆಯೇ ರಸ್ತೆಯಲ್ಲಿ ಡ್ಯಾನ್ಸ್ ಮಾಡಲು ಪ್ರಾರಂಭಿಸಿದ್ದಾರೆ. ಈ ವಿಡಿಯೋದಲ್ಲಿನ ದೃಶ್ಯದ ಬಗ್ಗೆ ಹೇಳುವುದಾದರೆ, ಮಹಿಳೆಯು ಮೊದಲು ಸಾಮಾನ್ಯವಾಗಿಯೇ ರಸ್ತೆಯ ಮೇಲೆ ನಡೆದು ಬರುತ್ತಾರೆ.

ಬಾಲಿವುಡ್ ಸಿನಿಮಾ ಹಾಡೊಂದಕ್ಕೆ ಸಾಮಾನ್ಯವಾಗಿ ಎಕ್ರ್ ಪ್ರೆಶನ್ ಗಳನ್ನು ನೀಡುತ್ತಾ, ಯಾವಾಗ ಹಾಡಿನ ಜೋಶ್ ಮತ್ತು ವೇಗ ಹೆಚ್ಚಾಗುವುದೋ ಕೂಡಲೇ ಮಹಿಳೆ ಸಹಾ ತನ್ನ ಆ್ಯಕ್ಟಿಂಗ್ ಬದಲಿಸಿ, ಭರ್ಜರಿ ಡ್ಯಾನ್ಸ್ ಮಾಡಲು ಆರಂಭಿಸುತ್ತಾರೆ.‌ ಈ ವೇಳೆ ಅಲ್ಲೇ ಇದ್ದ ಬೈಕ್ ಸವಾರರು ಅಚ್ಚರಿ ಪಟ್ಟದ್ದಾರೆ.

ತಾವು ಟ್ರಾಫಿಕ್ ನಲ್ಲಿ ಬೀಳಲಿರುವ ಗ್ರೀನ್ ಸಿಗ್ನಲ್ ಕಡೆಗೆ ನೋಡಬೇಕೋ ಅಥವಾ ಈ ಮಹಿಳೆಯ ಡ್ಯಾನ್ಸ್ ಅನ್ನೋ ಎನ್ನುವ ಅಯೋಮಯ ಪರಿಸ್ಥಿತಿಗೆ ಸಿಲುಕಿದ್ದಾರೆ. ಇನ್ಸ್ಟಾಗ್ರಾಂ ನಲ್ಲಿ ಶೇರ್ ಆಗಿರುವ ಈ ವೀಡಿಯೋಗೆ ನೆಟ್ಟಿಗರಿಂದ ವೈವಿದ್ಯಮಯ ಪ್ರತಿಕ್ರಿಯೆಗಳು ಹರಿದು ಬರುತ್ತಿದೆ.

ಆ ವಿಡಿಯೊ ಕೆಳಗಿದೆ ನೋಡಿ…

 

View this post on Instagram

 

A post shared by Hema sharma (@hemasharma973)

ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...