pragati-badiger-singing-kambada-myalina-bombeye

VIDEO : ದೇವಸ್ಥಾನದ ಮುಂದೆ ಸ್ಕೂಟಿ ಸ್ಟಾರ್ಟ್ ಮಾಡಿದ ಯುವತಿ ಸೀದಾ ಬಂದು ಬಿದ್ದಿದ್ದು ಭಗವಂತನ ಪಾದಕ್ಕೇ!

TODAY NEWS / ಕನ್ನಡ ಸುದ್ದಿಗಳು

ಸದ್ಯಕ್ಕೆ ಪ್ರಗತಿ ಬಡಿಗೇರ್ ಅವರ ಹೆಸರು ಸದ್ದಿಲ್ಲದೇ ಕರ್ನಾಟಕಲ್ಲೆಲ್ಲಾ ಸುದ್ದಿ ಆಗುತ್ತಿದೆ. ಇದಕ್ಕೆಲ್ಲಾ ಕಾರಣವಾದದ್ದು ಜೀ ಕನ್ನಡ ಎನ್ನುವ ಮಹಾನ್ ವೇದಿಕೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಲಿಟಲ್ ಚಾಂಪ್ಸ್ ಕಾರ್ಯಕ್ರಮದಲ್ಲಿ ಈಗಾಗಲೇ ಅನೇಕ ಪ್ರತಿಭೆಗಳು ಅನಾವರಣಗೊಂಡು ಈಗ ಸೆಲೆಬ್ರಿಟಿಗಳು ಎಂದು ಕರೆಸಿಕೊಳ್ಳುತ್ತಿದ್ದಾರೆ. ಇದೇ ಸಾಲಿನಲ್ಲಿ ಪ್ರಗತಿ ಬಡಿಗೇರ್ ಅವರ ಹೆಸರು ಸೇರಿದ್ದು, ಅವರು ಈಗ ಪ್ರಸಾರವಾಗುತ್ತಿರುವ 19ನೇ ಸೀಸನ್ ನ ಕಂಟೆಸ್ಟೆಂಟ್ ಕೂಡ ಆಗಿದ್ದಾರೆ.

ಕಳೆದ ಎರಡು ವಾರಗಳಿಂದ ಇವರ ಹಾಡುಗಾರಿಕೆ ಕೇಳಿರುವ ಕನ್ನಡಿಗರು ಇವರ ಸ್ವರಕ್ಕೆ ಮನಸೋತು ಅಭಿಮಾನಿಗಳಾಗಿದ್ದಾರೆ. ಅಷ್ಟು ಅದ್ಭುತವಾದ ಕಂಠವನ್ನು ಹೊಂದಿರುವ ಇವರಿಗೆ ಮೆಂಟರ್ ಆಗಿ ಇಂದು ನಾಗರಾಜ್ ಅವರು ಜವಾಬ್ದಾರಿ ಹೊತ್ತುಕೊಂಡಿದ್ದು, ಈ ವಾರ ಗೆಟಪ್ ರೌಂಡಿನಲ್ಲಿ ಉತ್ತರ ಕರ್ನಾಟಕದ ಜವಾರಿ ಗೆಟಪ್ ತೊಡಿಸಿ ಹಾಡಿಸಿದ್ದಾರೆ.

ನಾಗಮಂಡಲ ಚಿತ್ರದ “ಕಂಬದ ಮ್ಯಾಲಿನ ಬೊಂಬೆಯೇ” ಹಾಡನ್ನು ಈ ವಾರದ ಪರ್ಫಾರ್ಮೆನ್ಸ್ ಅಲ್ಲಿ ಹಿತವಾಗಿ ಹಾಡಿ ಇಡೀ ಸ್ವರ ಸಂಸ್ಥಾನವನ್ನೇ ಮಂತ್ರ ಮುಗ್ಧವನ್ನಾಗಿಸಿದ್ದಾರೆ. ಪ್ರಗತಿಯವರ ಹಾಡು ಕೇಳುತ್ತಿದ್ದಂತೆ ಎಲ್ಲರೂ ಕೂಡ ಆನಂದದಿಂದ ತಲೆ ದೂಗಿದ್ದಾರೆ. ಪ್ರಗತಿ ಅವರ ಧ್ವನಿಯ ಬಗ್ಗೆ ಯಾವುದೇ ಸಂಶಯ ಇಲ್ಲ, ಅಷ್ಟು ಶ್ರೇಷ್ಠವಾದ ಧ್ವನಿ ಹೊಂದಿರುವ ಇವರ ಹಾಡು ಶೃತಿ ತಪ್ಪುತಿತ್ತು.

ಈ ವಿಚಾರವಾಗಿ ವಿಜಯ ಪ್ರಕಾಶ್ ಅವರೂ ಸಹ ಇಂದು ನಾಗರಾಜ್ ಅವರಿಗೆ ಸಲಹೆ ನೀಡಿದ್ದರು. ಆದರೆ ಈ ವಾರ ಹಾಡಿದ ಪರ್ಫಾರ್ಮೆನ್ಸ್ ನಲ್ಲಿ ಎಲ್ಲೂ ಕೂಡ ಒಂದು ಎಳೆಯಷ್ಟು ಶೃತಿ ಆಚೆ ಈಚೆ ಆಗದೆ ಶ್ರುತಿಬದ್ಧವಾಗಿ ಹಾಡಿದ್ದಾರೆ. ಪ್ರಗತಿ ಬಡಿಗೇರ್ ಅವರ ಡೆಡಿಕೇಶನ್ ಅನ್ನು ವಿಜಯಪ್ರಕಾಶ್ ಅವರು ಮೆಚ್ಚಿ ಹಾಡಿ ಹೊಗಳಿದ್ದಾರೆ ಮತ್ತು ಈಕೆಯ ಪರ್ಫಾರ್ಮೆನ್ಸ್ ಆದ ಬಳಿಕ ಅವರಿಂದ ಕೆಲ ಕೆಲಸಗಳನ್ನು ಮಾಡಿಸಿದ್ದಾರೆ.

ಇವರ ಪರ್ಫಾರ್ಮೆನ್ಸ್ ಮುಗಿದ ತಕ್ಷಣ ವಿಜಯ ಪ್ರಕಾಶ್ ಅವರು ಮೂರು ಕೆಲಸ ಹೇಳುತ್ತೇನೆ ಮಾಡಿ ಎಂದು ಹೇಳಿ ಮೊದಲಿಗೆ ಮಹಾಗುರುಗಳಿಗೆ ನಮಸ್ಕಾರ ಮಾಡು. ಅಲ್ಲಿ ಸಂಗೀತ ನುಡಿಸುತ್ತಿರುವ ತಂಡಕ್ಕೆ ನಮಸ್ಕಾರ ಮಾಡು ಹಾಗೂ ನಿಮ್ಮ ಹೆತ್ತ ತಂದೆ ತಾಯಿಯ ಆಶೀರ್ವಾದ ಪಡೆದು ಇಂದು ನಾಗರಾಜ್ ಅವರನ್ನು ವೇದಿಕೆ ಮೇಲೆ ಕರೆದುಕೊಂಡು ಬಾ ಎಂದು ಹೇಳಿದ್ದಾರೆ.

ಅವರ ಕಾಲಿಗೂ ಪ್ರಗತಿ ನಮಸ್ಕಾರ ಮಾಡಿ ಕಣ್ತುಂಬಿಕೊಳ್ಳುತ್ತಾರೆ. ಇಂದು ನಾಗರಾಜ್ ಅವರು ಕೂಡ ಆನಂದಭಾಷ್ವ ಸುರಿಸಿದ್ದು ಎರಡು ವಾರಗಳಿಂದ ನನ್ನ ಮನಸ್ಸಿನಲ್ಲಿ ಬಹಳ ಕೊರಗಿತ್ತು, ಬಹಳ ಟ್ಯಾಲೆಂಟ್ ಹುಡುಗಿ ಆದರೆ ಶ್ರುತಿ ತಪ್ಪುತ್ತಿದ್ದಾಳೆ ಎಂದು, ಅದನ್ನು ಆಕೆಗೆ ಅರ್ಥ ಮಾಡಿಸಿ ಹೇಳಿಕೊಟ್ಟೆ, ನನ್ನ ಮೆಂಟರ್ ಗಿರಿಗಿಂತ ಹೆಚ್ಚಾಗಿ ಆಕೆ ಅದನ್ನು ಶ್ರದ್ಧೆಯಿಂದ ಕಲಿತು ಹಾಡು ಒಪ್ಪಿಸಿ ಇಲ್ಲಿ ಎಲ್ಲರ ಚಪ್ಪಾಳೆ ಗಿಟ್ಟಿಸಿದ್ದಾರೆ.

ಇದು ನನ್ನ ಜೀವನದ ಸಾರ್ಥಕ ದಿನ ಎನಿಸುತ್ತಿದೆ, ಈ ದಿನವನ್ನು ಎಂದು ಕೂಡ ಮರೆಯುವುದಿಲ್ಲ ಎಂದು ಇಂದು ನಾಗರಾಜ್ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. ವಿಜಯ ಪ್ರಕಾಶ್ ಅವರೂ ಸಹ ತುಂಬಾ ಚೆನ್ನಾಗಿ ಮೆಂಟರಿಂಗ್ ಮಾಡಿದ್ದೀರ ಎಂದು ಹೇಳಿ ಜ್ಯೂರಿ ಮೆಂಬರ್ಸ್ ಎಲ್ಲರಿಗೂ ಅಲ್ಲಿಂದಲೇ ಈ ಹುಡುಗಿಗೆ ಆಶೀರ್ವಾದ ಮಾಡಿ ಎಂದು ಕೇಳಿದ್ದಾರೆ.

ಪ್ರಗತಿ ಬಡಿಗೇರ್ ಅವರು ಈ ವಾರ ಅದ್ಭುತ ಪರ್ಫಾರ್ಮೆನ್ಸ್ ನೀಡಿದ್ದು ಇನ್ನು ಮುಂದೆ ಕೂಡ ಅದೇ ರೀತಿ ಧೈರ್ಯದಿಂದ ಹಾಗೂ ಛಲದಿಂದ ಹಾಡಿ ಜನಮನ ಮತ್ತು ಕಾರ್ಯಕ್ರಮ ಕೂಡ ಗೆಲ್ಲಲಿ ಎಂದು ಹಾರೈಸೋಣ. ಉತ್ತರ ಕರ್ನಾಟಕದ, ಅದರಲ್ಲೂ ಐತಿಹಾಸಿಕ ಸ್ಥಳವಾದ ಬಾದಾಮಿ – ಪಟ್ಟದಕಲ್ಲು ವಾತಾವರಣದಲ್ಲಿ ಬೆಳೆದ ಪ್ರಗತಿಯಲ್ಲಿ ಪ್ರತಿಭೆ ದೈವದತ್ತವಾಗಿಯೇ ಬಂದಿದೆ, ಅದಕ್ಕೆ ಸಾಣಿ ಹಿಡಿಯುವ ಕೆಲಸವಾಗಬೇಕಷ್ಟೆ.

ಅವರ ಹಾಡಿನ ಝಲಕ್ ಕೆಳಗಿದೆ ನೋಡಿ…

ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...