ಮನುಷ್ಯನ ದೇಹ ಬೆಳಗ್ಗೆಯಿಂದ ಸಂಜೆವರೆಗೂ ಕೆಲಸ ಮಾಡಿ ದಣಿದಿರುತ್ತದೆ ಮಲಗಿದರೆ ಸಾಕು ಎನ್ನುವ ಸ್ಥಿತಿಗೆ ಬಂದಿರುತ್ತೇವೆ ನಮ್ಮ ದೇಹದ ಆಗು ಹೋಗುವನ್ನು ಸಾಕ್ಷಾತ್ ಸೂರ್ಯದೇವನ ಅನುಗ್ರಹದಿಂದ ನಡೆಯುತ್ತದೆ. ಪ್ರತಿ ಮನುಷ್ಯನ ದೇಹದಲ್ಲೂ ದೈವ ಶಕ್ತಿ ಮತ್ತು ದುಷ್ಟ ಶಕ್ತಿನೂ ಇದೆ ಅವುಗಳನ್ನು ಅವಲಂಬನೆ ಮಾಡಿ ಮುನ್ನುಗ್ ಹೋಗುವುದು ಸಾಕ್ಷಾತ್ ಸೂರ್ಯ ದೇವನ ಕಿರಣಗಳು ಮಾತ್ರ.ಚಂದ್ರ ತಂಪನ್ನು ನೀಡುತ್ತಾನೆ.
ಬ್ರಾಹ್ಮಿ ಮುಹೂರ್ತದಲ್ಲಿ ಬೀಳುವಂತಹ ಒಳ್ಳೆಯ ಕನಸಾಗಲಿ ಕೆಟ್ಟ ಕನಸಾಗಲಿ ಎಲ್ಲವನ್ನು ನೀವೇ ಅನುಭವಿಸುತ್ತೀರಾ. ಸಪ್ನಗಳು ದೈವ ನಿಶ್ಚಯ ಬ್ರಾಹ್ಮಿ ಮುಹೂರ್ತದಲ್ಲಿ ಬೀಳುವಂತಹ ಸಪ್ನ ನಿಮ್ಮ ಜೀವನದಲ್ಲಿ ಸದಾ ಕಾಲ ಲಕ್ಷ್ಮೀ ಸ್ಥಾನಮಾನ ಹಾಗೂ ಭಾಗ್ಯದ ಬಾಗಿಲು ತೆರೆಸುತ್ತದೆ
ಬಹಳ ಮುಖ್ಯವಾಗಿ ಕನಸಿನಲ್ಲಿ ಹಾಲು ತುಂಬಿದ ಬಿಂದಿಗೆ ಬರಬೇಕು ಅದು ಬಹಳ ಶ್ರೇಷ್ಠ ಈ ರೀತಿಯ ಸ್ವಪ್ನ ಬಿದ್ದರೆ ಸಾಕ್ಷಾತ್ ಲಕ್ಷ್ಮಿ ಮನೆಗೆ ಬರುತ್ತಾಳೆ ಎಂದರ್ಥ. ಅಮೃತ ಲಕ್ಷ್ಮಿಗೆ ಸಮಾನ ಬಿಂದಿಗೆ ಅದೃಷ್ಟಕ್ಕೆ ಸಮಾನ ಇವೆರಡು ಮನುಷ್ಯನ ಜೀವನದಲ್ಲಿ ದರಿದ್ರವನ್ನು ದೂರ ಮಾಡುತ್ತದೆ. ಸ್ವಪ್ನದಲ್ಲಿ ಪಂಚಫಲ ಪುಷ್ಪವು ಇದ್ದರೆ ಅದ್ಭುತವಾದ ಪರಿವರ್ತನೆಯಾಗುತ್ತದೆ. ಈ ರೀತಿಯ ಸಪ್ನ ಬಿದ್ದರೆ ಶುಭ ಕಾರ್ಯ ನಡೆಯುತ್ತದೆ ಎಂಬ ಸೂಚನೆ.
ನಿಮ್ಮ ಸ್ವಪ್ನದಲ್ಲಿ ಮುತ್ತೈದೆಯರು ಪದೇ ಪದೇ ಬರುತ್ತಿದ್ದರೆ ದೇವಿಯ ಹರಕೆ ನೀವು ಯಾವುದೊ ಕೊಡುವುದು ಮರೆತಿದ್ದೀರಾ ಎಂದರ್ಥ. ಐದು ಜನ ಮುತ್ತೈದೆಯರು ಕನಸಿನಲ್ಲಿ ಬಂದರೆ ನಿಮ್ಮ ಮನೆಯಲ್ಲಿ ಶುಭಕಾರ್ಯ ನಿಶ್ಚಯವಾಗುತ್ತದೆ ಅಥವಾ ನಿಂತು ಹೋದ ಕಾರ್ಯ ನಡೆಯುತ್ತದೆ ಆ ಸಮಯದಲ್ಲಿ ದುರ್ಗೆ ಪೂಜೆ ದುರ್ಗೆ ಆರಾಧನೆ ಮಾಡುವುದರಿಂದ ತುಂಬಾ ಒಳ್ಳೆಯದಾಗುತ್ತದೆ.