ವರನ ಮುಂದೆಯೇ ತನ್ನ ಪ್ರೇಮಿಯ ಜೊತೆ ಭರ್ಜರಿ ಡ್ಯಾನ್ಸ್ ಮಾಡಿ ಅಪ್ಪಿಕೊಂಡ ವಧು! ಬಿಡಿಸಲು ಮನೆಯವರೇ ಬರಬೇಕಾಯಿತು!

TODAY NEWS / ಕನ್ನಡ ಸುದ್ದಿಗಳು

ಮದುವೆಯ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಸಹಾ ಒಂದು ವಿಶೇಷವಾದ‌ ಸಂಭ್ರಮದ ಸಂದರ್ಭವಾಗಿದೆ ಮತ್ತು ಈ ಸಂದರ್ಭದಲ್ಲಿ ಜನರು ಬಹಳಷ್ಟು ಖುಷಿಯಿಂದ ಇರುತ್ತಾರೆ ಮತ್ತು ಆನಂದವನ್ನು ಪಡೆಯುತ್ತಾರೆ. ಇನ್ನು ಮದುವೆಯ ಸಂದರ್ಭದಲ್ಲಿ ನೃತ್ಯ ಅಥವಾ ಡ್ಯಾನ್ಸ್ ಎನ್ನುವುದು ಒಂದು ದೊಡ್ಡ ಕ್ರೇಜ್ ಎನ್ನುವಂತಾಗಿದೆ. ಮದುವೆಯ ದಿನದಂದ ಅಲ್ಲಿ ಉಪಸ್ಥಿತರಿರುವ ಜನರು ಕುಣಿದು ಮೋಜು ಮಾಡುತ್ತಾರೆ.

ಇನ್ನು ಇತ್ತೀಚಿನ ದಿನಗಳಲ್ಲಿ ವಧುಗಳು ಸಹಾ ತಮ್ಮ ಮದುವೆಯ ಸಂಭ್ರಮದ ದಿನದಂದು ವೇದಿಕೆಯ ಮೇಲೆಯೇ ಭರ್ಜರಿ ನೃತ್ಯವನ್ನು ಮಾಡಲು ಪ್ರಾರಂಭಿಸಿದ್ದಾರೆ ಮತ್ತು ಅವರ ಡ್ಯಾನ್ಸ್ ವೀಡಿಯೋಗಳು ಸಹಾ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ವಧು ಡ್ಯಾನ್ಸ್ ಮಾಡಿರುವ ಅನೇಕ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಈ ವೀಡಿಯೋಗಳು ನೋಡಲು ತಮಾಷೆಯಾಗಿರುವುದು ಮಾತ್ರವೇ ಅಲ್ಲದೇ ಈ ವೀಡಿಯೋಗಳಿಗೆ ಸೋಶಿಯಲ್ ಮೀಡಿಯಾ ಬಳಕೆದಾರರು ಸಹಾ ಭರ್ಜರಿ ಮೆಚ್ಚುಗೆಗಳನ್ನು ನೀಡುವುದರ ಜೊತೆಗೆ, ಇಂತಹ ವಿಡಿಯೋಗಳನ್ನು ನೋಡಲು ಸಹಾ ಬಹಳ ಆಸಕ್ತಿಯನ್ನು ತೋರಿಸುತ್ತಾರೆ. ಈಗ ಪ್ರಸ್ತುತ ಅಂತಹುದೇ ಒಂದು ಡ್ಯಾನ್ಸ್ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇದರಲ್ಲಿ ವಧು ಬಹಳ ಜೋಶ್ ನಿಂದ ಡ್ಯಾನ್ಸ್ ಮಾಡುತ್ತಿರುವುದು ಕಂಡುಬಂದಿದ್ದು, ಇದರಲ್ಲಿ ವರನನ್ನು ಬಿಟ್ಟು ಆಕೆ ತನ್ನ ಪ್ರೇಮಿಯೊಂದಿಗೆ ಡ್ಯಾನ್ಸ್ ಮಾಡಿದ್ದಾಳೆ.ಮದುವೆಗಳಲ್ಲಿ ಇಂತಹ ಘಟನೆಗಳು ಅನೇಕ ಬಾರಿ ನಡೆಯುತ್ತವೆ. ಅದನ್ನು ನೋಡಿ ಜನರು ಆಶ್ಚರ್ಯ ಪಡುವ ಜೊತೆಗೆ ಆನಂದವನ್ನು ಸಹಾ ಪಡೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ, ಸಾಮಾಜಿಕ ಜಾಲತಾಣಗಳ ಯುಗದಲ್ಲಿ, ಜನರು ಇಂತಹ ವಿಶೇಷವಾದ ಘಟನೆಗಳನ್ನು ರೆಕಾರ್ಡ್ ಮಾಡಿ ವೈರಲ್ ಮಾಡಿ ಬಿಡುತ್ತಾರೆ.

ವೈರಲ್ ಆಗುವ ಈ ವೀಡಿಯೋಗಳು ಜನರು ನಗುವಿನ ಜೊತೆಗೆ ಮನರಂಜನೆಯನ್ನು ಸಹಾ ನೀಡುತ್ತದೆ. ಈಗ ವೈರಲ್ ಆಗಿರುವ ವೀಡಿಯೋದಲ್ಲಿ, ವಧು ತನ್ನ ಗೆಳೆಯನೊಂದಿಗೆ ಗೋವಿಂದ ಮತ್ತು ರಾಣಿ ಮುಖರ್ಜಿ ನಟನೆಯ ‘ತುಜ್ಕೊ ಹಿ ದುಲ್ಹನ್ ಬನಾವುಂಗಾ’ ಹಾಡಿಗೆ ಭರ್ಜರಿ ನೃತ್ಯ ಮಾಡುವುದನ್ನು ನೋಡಬಹುದಾಗಿದೆ.

ಇನ್ನು ಈ ವೇಳೆ ವರನು ಶಾಂತವಾಗಿ ನಿಂತಿದ್ದರೆ, ವಧುವಿನ ಡ್ಯಾನ್ಸ್ ನೋಡಲು ಮನೆಯ ಹೊರಗೆ ಜನಸಂದಣಿಯೇ ಸೇರಿದೆ. ವಧು ತನ್ನ ಪ್ರೇಮಿಯೊಂದಿಗೆ ಬಹಳ ಅದ್ಭುತವಾದ ನೃತ್ಯ ಮಾಡುತ್ತಾಳೆ ಮತ್ತು ನೃತ್ಯ ಮಾಡುವಾಗ ಇಬ್ಬರೂ ಒಬ್ಬರನ್ನೊಬ್ಬರು ಅಪ್ಪಿಕೊಳ್ಳುತ್ತಾರೆ ಕೂಡಾ.

ಇಬ್ಬರನ್ನೂ ಪ್ರತ್ಯೇಕ ಮಾಡಲು ಆಗ ಅಲ್ಲೊಬ್ಬ ಮಹಿಳೆ ಮುಂದೆ ಬಂದಿರುವುದನ್ನು ನಾವು ವೈರಲ್ ವಿಡಿಯೋದಲ್ಲಿ ನೋಡಬಹುದಾಗಿದ್ದು. ಅಪ್ಪಿಕೊಂಡ ಇಬ್ಬರೂ ಒಬ್ಬರನ್ನೊಬ್ಬರು ಬಿಡಲು ಸಿದ್ಧರಿಲ್ಲದೇ ಇರುವಾಗ ಅವರ ನಡುವಿನ ಕೆಮಿಸ್ಟ್ರಿ ಎಲ್ಲರಿಗೂ ಕಂಡಿದೆ. ಈ ವೀಡಿಯೊವನ್ನು ಜಾಕಿ ಯಾದವ್ ಎಂಬ ಟ್ವಿಟರ್ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಶೀರ್ಷಿಕೆಯಲ್ಲಿ ಅವರು, ‘ಸಹೋದರರೇ, ವರ ಬದುಕಿದ್ದಾನೋ ಅಥವಾ ತೀರಿಹೋಗಿದ್ದಾನೋ ಎಂಬುದನ್ನು ದಯವಿಟ್ಟು ಪತ್ತೆ ಮಾಡಿ’ ಎಂದು ವ್ಯಂಗ್ಯ ಮಾಡಿದ್ದಾರೆ. ನೆಟ್ಟಿಗರು ಸಹಾ ವ್ಯಂಗ್ಯದ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಎಲ್ಲೂ ನಾಟಕೀಯತೆ ಅನಿಸದ ರಿಯಲ್ ವಿಡಿಯೊ ಇದಾಗಿದ್ದು ಹೀಗಾಗಿಯೇ ಸೋಶಿಯಲ್ ಮೀಡಿಯಾದ ಹಲವು ವೇದಿಕೆಗಳಲ್ಲಿ ವೈರಲ್ ಆಗುತ್ತಿದೆ.

ಆ ವಿಡಿಯೊ ಕೆಳಗಿದೆ ನೋಡಿ…

ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...