ಉಚಿತ-ಚಿಕಿತ್ಸೆ

ಈ ಕಾರ್ಡ್ ನಿಮ್ಮ ಬಳಿ ಇದ್ರೆ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ಪಡೆಯಬಹುದು,ಇದರ ಸಂಪೂರ್ಣ ಮಾಹಿತಿ ಇಲ್ಲಿದೆ

HEALTH/ಆರೋಗ್ಯ

ಪ್ರತಿಯೊಬ್ಬರಿಗು ಸಹ ಆಯುಷ್ಮನ್ ಹೆಲ್ತ್ ಕಾರ್ಡ್ ಹಾಗೂ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಐಡಿ ಕಾರ್ಡ್ ಎಲ್ಲರಿಗೂ ತುಂಬಾ ಉಪಯುಕ್ತವಾಗಿದೆ ತುಂಬಾ ಜನ ಬಡವರಿಗೆ ಸರಕಾರ ನೆರವನ್ನು ನೀಡುತ್ತಿದೆ ಹಾಗಾಗಿ ಪ್ರತಿಯೊಬ್ಬರೂ ಸಹ ಆಯುಷ್ಮನ್ ಹೆಲ್ತ್ ಕಾರ್ಡ್ ಹಾಗೂ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಐಡಿ ಕಾರ್ಡ್ ಮಾಡಿಸುವ ಮೂಲಕ ಸರಕಾರದ ಪ್ರಯೋಜನವನ್ನು ಪಡೆದುಕೊಳ್ಳಬಹುದು ಆಯುಷ್ಮನ್ ಹೆಲ್ತ್ ಕಾರ್ಡ್ ಮೂಲಕ ಅನೇಕ ನಾಗರಿಕರಿಗೆ ವೈದ್ಯಕೀಯ ಸೌಲಭ್ಯಗಳ ವೆಚ್ಚಗಳ ಕಡೆಗೆ ಸರಕಾರದ ನೆರವನ್ನು ಪಡೆಯುವಂತಾಗಿದೆ.

ಆಯುಷ್ಮಾನ್ ಕಾರ್ಡ್ ಹೊಂದಿರುವವರಿಗೆ ಐದು ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಹಾಗಾಗಿ ಅನೇಕ ಅಸಹಾಯಕ ಬಡವರಿಗೆ ನೆರವನ್ನು ನೀಡಿದಂತಾಗಿದೆ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಐಡಿ ಕಾರ್ಡ್ ಆರೋಗ್ಯಕ್ಕೆ ಸಂಬಂಧ ಪಟ್ಟ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಮಾಡುವುದಕ್ಕಾಗಿ ಈ ಕಾರ್ಡ್ ಜಾರಿಗೆ ಬಂದಿದೆ ನಾವು ಈ ಲೇಖನದ ಮೂಲಕ ಆಯುಷ್ಮನ್ ಹೆಲ್ತ್ ಕಾರ್ಡ್ ಹಾಗೂ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಐಡಿ ಕಾರ್ಡ್ ಬಗ್ಗೆ ತಿಳಿದುಕೊಳ್ಳೋಣ.

ತುಂಬಾ ಜನರು ಆಯುಷ್ಮನ್ ಹೆಲ್ತ್ ಕಾರ್ಡ್ ಅನ್ನು ಮಾಡಿಸಿದ್ದಾರೆ ಹಾಗೆಯೇ ನೇಷನಲ್ ಹೆಲ್ತ್ ಕಾರ್ಡ್ ಅನ್ನು ಮಾಡಿಸಬೇಕಾ ಎನ್ನುವ ಗೊಂದಲ ಎಲ್ಲರಲ್ಲಿಯೂ ಇರುತ್ತದೆ ಆಯುಷ್ಮನ್ ಭಾರತ್ ಹೆಲ್ತ್ ಕಾರ್ಡ್ ಮಾಡಿಸುವುದರಿಂದ ಐದು ಲಕ್ಷದವರೆಗೆ ಒಂದು ವರ್ಷ ದ ಒಳಗೆಚಿಕಿತ್ಸೆಗೆ ಹಣ ಸಿಗುತ್ತದೆ ಆಸ್ಪತ್ರೆಯ ಮೆಡಿಸಿನ್ ಚಾರ್ಜ್ ಹಾಗೂ ಉಳಿದ ಎಲ್ಲ ಚಾರ್ಜ್ ಗಳನ್ನು ಈ ಕಾರ್ಡ್ ನೀಡುತ್ತದೆ ಅಷ್ಟೇ ಅಲ್ಲದೆ ಆಸ್ಪತ್ರೆಯಿಂದ ಡಿಸಚಾರ್ಜ್ ಆಗಿ ಹದಿನೈದು ದಿನದ ವರೆಗೆ ಮಾತ್ರೆಗಳನ್ನುವೆಚ್ಚವನ್ನು ಸಹ ಉಚಿತವಾಗಿ ಪಡೆಯಬಹುದು.

Covid-19 testing and treatment is free for Ayushman Bharat beneficiaries in registered hospitals |ನೊಂದಾಯಿತ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ್ ಫಲಾನುಭವಿಗಳಿಗೆ ಕೋವಿಡ್ -19 ಪರೀಕ್ಷೆ ಮತ್ತು ...

ಒಂದು ವರ್ಷ ದವರೆಗೆ ಒಂದು ಕುಟುಂಬದವರೆಗೆ ಐದು ಲಕ್ಷದ ವರೆಗೆ ಹಣವನ್ನು ನೀಡುತ್ತದೆ ಮೆಡಿಕಲ್ ಚೆಕಪ್ ಚಾರ್ಜರ್ಸ್ ಅನ್ನು ಆಯುಷ್ಮನ್ ಭಾರತ್ ಹೆಲ್ತ್ ಕಾರ್ಡ್ ಗೆ ಅಪ್ಲೈ ಮಾಡಿ ಪಡೆದುಕೊಳ್ಳಬಹುದು ಯಾರು ಆಯುಷ್ಮನ್ ಭಾರತ್ ಹೆಲ್ತ್ ಕಾರ್ಡ್ ಮಾಡಿಸಿರುತ್ತಾರೋ ಅವರಿಗೆ ಐದು ಲಕ್ಷದ ವರೆಗೆ ಹಣವನ್ನು ಟ್ರೀಟ್ಮೆಂಟ್ ಆಗಿ ಸರಕಾರ ನೀಡುತ್ತದೆ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಐಡಿ ಕಾರ್ಡ್ ಮಾಡಿಸುವುದರಿಂದ ಉಚಿತವಾದ ಟ್ರೀಟ್ಮೆಂಟ್ ಸೌಲಭ್ಯ ಸಿಗುವುದು ಇಲ್ಲ.

ಆರೋಗ್ಯಕ್ಕೆ ಸಂಬಂಧ ಪಟ್ಟ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಮಾಡುವುದಕ್ಕಾಗಿ ಈ ಕಾರ್ಡ್ ಜಾರಿಗೆ ಬಂದಿದೆ ಯಾವುದಾದರೂ ಒಂದು ಖಾಯಿಲೆಗೆ ಸಂಬಂಧಪಟ್ಟಂತೆ ಟ್ರೀಟ್ಮೆಂಟ್ ಮಾಡಿಸಿದ ಸ್ಕ್ಯಾನಿಂಗ್ ಮಾಡಿಸಿದ ಬೇರೆ ಬೇರೆ ಡಾಕ್ಟರ್ ಬಳಿ ಟ್ರೀಟ್ಮೆಂಟ್ ಸಹ ಈ ಹೆಲ್ತ್ ಐಡಿ ಕಾರ್ಡ್ ಅಲ್ಲಿ ಇರುತ್ತದೆ ಹಾಗೆಯೇ ಡಿಜಿಟಲ್ ರೂಪದಲ್ಲಿ ಸೇವ್ ಆಗಿ ಇರುತ್ತದೆ

ಈ ಉದ್ದೇಶದಿಂದ ಹೆಲ್ತ್ ಐಡಿ ಕಾರ್ಡ್ ಅನ್ನು ಮಾಡಿಸಬೇಕುಬೇರೆ ಬೇರೆ ಡಾಕ್ಟರ್ ಬಳಿ ಹೋದಾಗ ಹೆಲ್ತ್ ಇನ್ಫರ್ಮೇಷನ್ ಗಾಗಿ ಈ ಐಡಿ ಕಾರ್ಡ್ ತುಂಬಾ ಉಪಯುಕ್ತವಾಗಿದೆ .ಇರುತ್ತದೆ ಆರೋಗ್ಯದ ಕಡೆಗೆ ದುಂದು ವೆಚ್ಚ ಮಾಡುವುದನ್ನು ತಡೆಗಟ್ಟಬಹುದು ಹೆಲ್ತ್ ಐಡಿ ಕಾರ್ಡ್ ಮಾಡಿಸುವ ಮೂಲಕ ಫೋನ್ ಗಳ ಮೂಲಕ ಡಾಕ್ಟರ್ ಅವರನ್ನು ಸಂಪರ್ಕಿಸಬಹುದು ಹೀಗೆ ಆಯುಷ್ಮನ್ ಹೆಲ್ತ್ ಕಾರ್ಡ್ ಹಾಗೂ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಐಡಿ ಕಾರ್ಡ್ ಎಲ್ಲರಿಗೂ ತುಂಬಾ ಉಪಯುಕ್ತವಾಗಿದೆ,ಆಯುಷ್ಮನ್ ಹೆಲ್ತ್ ಕಾರ್ಡ್ ಬಡವರಿಗೆ ತುಂಬಾ ಸಹಾಯಕವಾಗಿದೆ.

ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...