ಮುದ್ದು ಕೊರವಂಜಿಯಾಗಿ ಕಣಿ ಹೇಳಿ ಮಹಾಗುರುಗಳ ಮನಗೆದ್ದ ದಿಯಾ ಹೆಗ್ಡೆ! ಸರಿಗಮಪ ಲಿಟಲ್ ಚಾಂಪ್ಸ್ ‘ಜಾನಪದ ಸಂಕ್ರಾಂತಿ’

TODAY NEWS / ಕನ್ನಡ ಸುದ್ದಿಗಳು

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಸೀಸನ್ 19 ಸೆಂಟರ್ ಆಫ್ ಅಟ್ರಾಕ್ಷನ್ ಎಂದರೆ ಅದು ದಿಯಾ ಹೆಗಡೆ. ದಿಯಾ ಹೆಗಡೆಯ ಕಂಚಿನ ಕಂಠದ ಗಾಯನ ಮತ್ತು ಮುದ್ದಾದ ಅಭಿನಯದ ಮೂಲಕ ಸಾಕಷ್ಟು ಜನರ ಮನಸ್ಸನ್ನು ಸೆಳೆದಿದ್ದಾರೆ. ಪ್ರತಿ ವಾರ ಕೂಡ ವಿಶೇಷವಾಗಿ ಹಾಡನ್ನು ತಯಾರಿಸಿಕೊಂಡು ಬಂದು ಹಾಡುವ ಇವರು ಆ ಹಾಡಿನ ಜೊತೆ ಎಕ್ಸ್ಟ್ರಾ ಪರ್ಫಾರ್ಮೆನ್ಸ್ ಕೊಟ್ಟು ಎಲ್ಲರ ಗಮನ ಸೆಳೆದುಬಿಡುತ್ತಾರೆ. ಪ್ರತಿ ವಾರ ಕೂಡ ಅವರ ಗಾಯನ ಕೇಳುವುದರ ಜೊತೆಗೆ ಆಕ್ಟಿವಿಟಿ ನೋಡಲು ಅಲ್ಲಿರುವ ಜಡ್ಜಸ್, ಜ್ಯೂರಿ ಮೆಂಬರ್ಸ್ ಜೊತೆ ಪ್ರೇಕ್ಷಕರು ಕಾಯುತ್ತಿರುತ್ತಾರೆ.

ದಿಯಾ ಹಾಡಿರುವ ನಾ ಮುದುಕಿ ಆದರೆ ಏನಂತಿ ಇನ್ನೂ ಇರಾಕಿ ಆ ಹಾಡು ಮತ್ತು ಶಿವರಾಜ್ ಕುಮಾರ್ ಅವರ ಪ್ರಯುಕ್ತ ಏರ್ಪಡಿಸಲಾಗಿದ್ದ ವಾರದಲ್ಲಿ ಅವರೇ ಕಟ್ಟಿ ಹಾಡಿದ ಅಚ್ಚುಮೆಚ್ಚಿನ ಅಣ್ಣಾವ್ರು ಒಬ್ರು ಕನ್ನಡ ಚಿತ್ರರಂಗದಲ್ಲಿ ಹಾಡು ಮತ್ತು ಅವರ ಟ್ವಿಂಕಲ್ ಟ್ವಿಂಕಲ್ ಹಾಡು ಮತ್ತು ಅಪ್ಪು ಎನ್ನುವ ಪದವನ್ನು ವಿವರಿಸಿ ಆಡಿದ ಹಾಡು… ಹೀಗೆ ಪ್ರತಿಯೊಂದು ಪರ್ಫಾರ್ಮೆನ್ಸ್ ಕೂಡ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ.

ಜೀ ಕನ್ನಡ ಗೆ ಬಂದ ಮೇಲೆ ಸೋಶಿಯಲ್ ಮೀಡಿಯಾದಲ್ಲೂ ದಿಯಾ ಹೆಗ್ಡೆಗೆ ಸಂಬಂಧಪಟ್ಟ ವಿಡಿಯೋಗಳು ಸಾಕಷ್ಟು ವೈರಲ್ ಆಗುತ್ತಿವೆ. ಈ ವಾರ ಕೂಡ ಆಕೆ ಪರ್ಫಾರ್ಮೆನ್ಸ್ ರೌಂಡಿನಲ್ಲಿ ಕೊರವಂಜಿಯ ವೇಷ ಧರಿಸಿ ಕೊರವಂಜಿ ಹಾಡನ್ನು ಹಾಡಿದ್ದಾರೆ. ಎಂದಿನಂತೆ ಹಾಡು ಮುಗಿದ ಬಳಿಕ ಕೆಲ ಚಟುವಟಿಕೆಗಳನ್ನು ಮಾಡಿದ್ದಾರೆ. ಈ ಬಾರಿ ಕೂಡ ತನ್ನ ಪರ್ಫಾರ್ಮೆನ್ಸ್ ಗೆ ಆಕೆ ಅನುಶ್ರೀಯನ್ನು ಬಳಸಿಕೊಂಡಿದ್ದಾರೆ.

ನಾನು ಕಣಿ ಹೇಳುತ್ತೇನೆ, ಇಲ್ಲಿವರೆಗೆ ನಾನು ಹೇಳಿರುವ ಯಾವ ಕಣಿ ಕೂಡ ಸುಳ್ಳಾಗಿಲ್ಲ ಎಂದು ಹೇಳಿದ್ದಾರೆ. ಅನುಶ್ರೀ ಕೈ ನೋಡಿ ನಿನ್ನ ಕೈ ರೇಖೆಗಳು ನೀನು ಮಹಾರಾಣಿ ಎಂದು ಹೇಳುತ್ತಿದೆ, ನಿನ್ನ ಭವಿಷ್ಯ ಈ ವರ್ಷ ಮಿಂಚುತ್ತದೆ, ಈ ವರ್ಷ ಮದುವೆ ಆಗುತ್ತೀಯ ಎಂದು ಕಲ್ಯಾಣ ರೇಖೆ ಹೇಳುತ್ತಿದೆ, ಅದರ ಸಲುವಾಗಿ ಈಗಾಗಲೇ ಒಬ್ಬರು ಸಾಗರದಿಂದ ನಿನ್ನನ್ನು ಹುಡುಕಿಕೊಂಡು ಕೂಡ ಬಂದಿರಬೇಕಲ್ಲ ಎಂದು ಹೇಳಿದ್ದಾರೆ.

ನಿಮ್ಮ ಯುಟ್ಯೂಬ್ ಸಬ್ಸ್ರೈಬರ್ ಸಂಖ್ಯೆಯು ಕೂಡ ಬಹಳ ಹೆಚ್ಚಾಗಲಿದೆ, ಆದರೆ ದಿಯಾಳಷ್ಟಲ್ಲಾ ಎಂದು ತಮಾಷೆ ಮಾಡಿದ್ದಾರೆ. ಮದುವೆ ಆಗುವ ಯಾರು ಎಂದು ಏನಾದರೂ ಕಾಣಿಸುತ್ತಿದೆಯಾ ಎಂದು ಅನುಶ್ರೀ ಅವರು ಕೇಳಿದಾಗ ಅಲ್ಲೇ ಇದ್ದ ವಿಜಯ ಪ್ರಕಾಶ್, ಕೊರವಂಜಿಗೆ ಏನು ಇಡೀ ಸೆಟ್ಟಿಗೆ ಅವರು ಕಾಣುತ್ತಿದ್ದಾರೆ ಎಂದು ಮತ್ತೊಮ್ಮೆ ಅನುಶ್ರೀ ಅವರ ಮೇಲೆ ತಮಾಷೆ ಮಾಡಿದ್ದಾರೆ.

ನಂತರ ಅರ್ಜುನ್ ಜನ್ಯ ಅವರ ಬಳಿ ಬಂದು ಅವರ ಕೈ ಹಿಡಿದುಕೊಂಡು ರೇಖೆಯೆಲ್ಲಾ ಇಎಂಐ ಕಟ್ಟಿಕಟ್ಟಿ ಸವೆದು ಹೋಗಿದೆಯಲ್ಲಾ ಎಂದಿದ್ದಾರೆ. ಅವರ ಆ ಮಾತಿಗೆ ಅಲ್ಲಿದ್ದವರೆಲ್ಲಾ ಜೋರಾಗಿ ನಕ್ಕಿದ್ದಾರೆ ಮತ್ತು ಈ ವರ್ಷ ಕೂಡ ಜೀ ಕನ್ನಡದಲ್ಲಿ ಸಾಕಷ್ಟು ಪ್ರೋಗ್ರಾಮ್ ಗಳು ಇರುವುದರಿಂದ ಈ ವರ್ಷದ ಇಎಮ್ಐ ಗೆ ಯೋಚನೆ ಏನು ಇರುವುದಿಲ್ಲ ಬಿಡಿ ಎಂದಿದ್ದಾರೆ. ಇವರು ಕಣಿ ಹೇಳುವ ಪರಿಗೆ ಮನಸೋತ ಹಂಸಲೇಖ ಅವರ ಸಹ ಕಣಿ ಹೇಳುವವರ ಪದವನ್ನು ಹೇಳಿದ್ದಾರೆ.

ಯಾರು ಸಹ ಹಂಸಲೇಖ ಅವರು ಈ ಪರಿ ನೆನಪು ಇಟ್ಟುಕೊಂಡು ಅಷ್ಟು ಉದ್ದದ ಕಣಿಪದವನ್ನು ಹೇಳುತ್ತಾರೆ ಎಂದು ಊಹಿಸಿರಲಿಲ್ಲ. ಅನುಶ್ರೀಯವರು ಅದು ಮುಗಿಯುವವರೆಗೂ ಮಹಾ ಗುರುಗಳೇ ನಿಜವಾಗಲೂ ಆಶ್ಚರ್ಯ ಅಂದುಕೊಂಡೇ ಅವರನ್ನೇ ಬಾಯಿಬಿಟ್ಟಿಕೊಂಡು ನೋಡುತ್ತಾ ನಿಂತುಬಿಟ್ಟಿದ್ದಾರೆ. ಒಟ್ಟಿನಲ್ಲಿ ದಿಯಾ ಈ ಪರ್ಫಾರ್ಮೆನ್ಸ್ ಇಂದ ಇಡೀ ಸೆಟ್ಟಿಗೆ ಹಾಗೂ ಪ್ರೇಕ್ಷಕರಿಗೂ ಭರಪೂರ ಮನರಂಜನೆ ದೊರೆತಿದೆ.

ಆ ವಿಡಿಯೊ ಕೆಳಗಿದೆ ನೋಡಿ…

ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...