ಸೋಶಿಯಲ್ ಮೀಡಿಯಾ ಜಗತ್ತು ನಿಜಕ್ಕೂ ಅದ್ಭುತವಾಗಿದೆ. ಇದು ಎಲ್ಲ ವಯಸ್ಸಿನವರಿಗೆ ಅವರವರ ಇಷ್ಟದ ಪ್ರಕಾರ ಕಂಟೆಂಟ್ ತಂದು ಕೊಡುತ್ತದೆ. ಯಾರಿಗೆ ಯಾವುದು ಇಷ್ಟವೋ ಅದು ಇಲ್ಲಿ ಸಿಕ್ಕೇ ಸಿಗುತ್ತದೆ.
ಇನ್ನು ಸೋಶಿಯಲ್ ಮೀಡಿಯಾ ಅನೇಕರಿಗೆ ಒಳ್ಳೆಯ ಪ್ಲಾಟ್ಫಾರ್ಮ್ ಸಹ ಆಗಿದೆ. ತಮ್ಮಲ್ಲಿರುವ ಅದ್ಭುತವಾಗಿರತಕ್ಕಂತಹ ಗುಣಗಳನ್ನು ಸಾದರಪಡಿಸಲು ಉತ್ತಮವಾದ ಮಾಧ್ಯಮವಾಗಿದೆ. ಸೋಶಿಯಲ್ ಮೀಡಿಯಾ ಮುಖಾಂತರ ಅನೇಕ ಸಾಮಾನ್ಯರು ತಮ್ಮ ಹೆಸರನ್ನು ಗಳಿಸಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಇಷ್ಟವಾಗುವ ಕಂಟೆಂಟ್ ಎಂದರೆ ಡಾನ್ಸ್. ಕೆಲವರು ತುಂಬಾ ಸಾಮಾನ್ಯವಾಗಿ ಸಹಜವಾಗಿ ಡಾನ್ಸ್ ಮಾಡಿದರೂ ನೋಡು ನೋಡುವಷ್ಟರಲ್ಲಿ ವೈರಲ್ ಆಗಿಬಿಡುತ್ತಾರೆ. ಸದ್ಯ ಇದೇ ರೀತಿಯ ಒಂದು ತುಂಬಾ ಸುಂದರ ಹಾಗೂ ಅಷ್ಟೇ ಸಿಂಪಲ್ ಡಾನ್ಸ್ ನಿಮ್ಮ ಮುಂದೆ ತಂದಿದ್ದೇವೆ.
ಈ ವಿಡಿಯೋದಲ್ಲಿ ಯುವತಿಯೊಬ್ಬಳು ಬಾಲಿವುಡ್ ನ ಸೂಪರ್ ಹಿಟ್ ಹಾಡಿಗೆ ತುಂಬಾ ಸಹಜವಾಗಿ ನೃತ್ಯ ಮಾಡಿದ್ದಾಳೆ. ಈ ನೃತ್ಯವು ನೆಟ್ಟಿಗರಿಗೆ ತುಂಬಾ ಇಷ್ಟವಾದಂತೆ ಕಾಣುತ್ತಿದೆ. ಕಾರಣ ಈ ವಿಡಿಯೋ ತುಂಬಾ ವೇಗದಲ್ಲಿ ವೈರಲ್ ಆಗುತ್ತಿದೆ.
ಹಾಡಿನಲ್ಲಿಯ ದೃಶ್ಯ ನೋಡುಗರ ಕಣ್ಣುಗಳನ್ನು ಸೆಳೆಯುತ್ತಿದೆ. ತಂಪಾದ ಚಳಿಯಲ್ಲಿ ರಾತ್ರಿಯ ಮಂದವಾದ ಬೆಳಕಿನಲ್ಲಿ ಹಿಂದಿ ಭಾಷೆಯ ಹಾಡಿನ ಅರ್ಥಕ್ಕೆ ಅನುಗುಣವಾಗಿ ಅಷ್ಟೇ ಸಹಜವಾಗಿ ಮಾಡಿದ ಈ ಡಾನ್ಸ್ ನಿಜಕ್ಕೂ ಸೂಪರ್ ಆಗಿದೆ.
ನೋಡಿ ಈ ಡಾನ್ಸ್…
View this post on Instagram