ಅಪ್ಪು

ವಿಶ್ವವಿಖ್ಯಾತ ಹಂಪಿಯಲ್ಲಿ ‘ಅಪ್ಪು ಹಬ್ಬ’

Uncategorized

ಅಪ್ಪು ಹುಟ್ಟುಹಬ್ಬದ ಮುನ್ನಾದಿನ ವಿಶ್ವವಿಖ್ಯಾತ ಹಂಪಿಯಲ್ಲಿ (Hampi) ‘ಅಪ್ಪು ಹಬ್ಬ’  ಆಚರಿಸಲಾಗುತ್ತಿದೆ. ಫ್ರೆಂಡ್ಸ್ ಗ್ರೂಪ್ ಹಂಪಿ ವತಿಯಿಂದ ‘ಅಪ್ಪು ಹಬ್ಬ’ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಹಂಪಿಯ ವಿರೂಪಾಕ್ಷ ದೇವಸ್ಥಾನದಿಂದ ಅಪ್ಪು ಭಾವಚಿತ್ರ ಹಿಡಿದು ಮೆರವಣಿಗೆ ನಡೆಸಲಾಗುತ್ತಿದೆ. ಹೌದು, ಅಪ್ಪು ಹುಟ್ಟುಹಬ್ಬದ ಮುನ್ನಾದಿನ ವಿಶ್ವವಿಖ್ಯಾತ ಹಂಪಿಯಲ್ಲಿ (Hampi) ‘ಅಪ್ಪು ಹಬ್ಬ’  ಆಚರಿಸಲಾಗುತ್ತಿದೆ. ಫ್ರೆಂಡ್ಸ್ ಗ್ರೂಪ್ ಹಂಪಿ ವತಿಯಿಂದ ‘ಅಪ್ಪು ಹಬ್ಬ’ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಹಂಪಿಯ ವಿರೂಪಾಕ್ಷ ದೇವಸ್ಥಾನದಿಂದ ಅಪ್ಪು ಭಾವಚಿತ್ರ ಹಿಡಿದು ಮೆರವಣಿಗೆ ನಡೆಸಲಾಗುತ್ತಿದೆ.

ಮೆರವಣಿಗೆಯುದ್ದಕ್ಕೂ ಸಾಂಸ್ಕೃತಿಕ ಕಲಾತಂಡಗಳಿಂದ ಕಲಾ ಪ್ರದರ್ಶನ  ಕಣ್ಮನ ಸೆಳೆಯುತ್ತಿದೆ. ಈ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ವೇಷಗಾರರರ ಕಲೆ, ನಂದಿಕೋಲು ಕುಣಿತ, ಲಂಬಾಣಿ ನೃತ್ಯ, ಕೋಲಾಟ ತಂಡಗಳಿಂದ ಕಲಾ ವೈಭವ ಈ ಅಪ್ಪು ಹಬ್ಬಕ್ಕೆ (Appu Habba) ಮೆರುಗು ತಂದಿದೆ.

ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದ ಪವರ್ ಸ್ಟಾರ್ ಅಭಿಮಾನಿಗಳು, ಅಪ್ಪು ಎಂದಿಗೂ ನಮ್ಮೊಂದಿಗಿದ್ದಾರೆ, ಹೀಗಾಗಿ ಅವರ ನಾಳಿನ ಹುಟ್ಟುಹಬ್ಬವನ್ನು ಇಂದೇ ಸಂಭ್ರಮದಿಂದ ಆಚರಿಸುತ್ತಿದ್ದೇವೆ ಎಂದಿದ್ದಾರೆ.

ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...

Leave a Reply

Your email address will not be published.