ಅಮೂಲ್ಯ

ಮಕ್ಕಳಾದ 6 ತಿಂಗಳಿಗೆ ಇನ್ನೊಂದು ಸಂತೋಷದ ಸುದ್ದಿ ತಿಳಿಸಿದ ಅಮೂಲ್ಯ..

TODAY NEWS / ಕನ್ನಡ ಸುದ್ದಿಗಳು
ಕನ್ನಡ ಚಿತ್ರರಂಗದ ಖ್ಯಾತ ನಟಿ ಅಮೂಲ್ಯ ರವರಿಗೆ ಸೆ.14 ಹುಟ್ಟುಹಬ್ಬ ಸಂಭ್ರಮ. ಅಪಾರ ಸಂಖ್ಯೆಯ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯ ಜನ್ಮದಿನಕ್ಕೆ ಶುಭ ಕೋರಿದ್ದು ಕುಟುಂಬದವರು ಸೆಲೆಬ್ರಿಟಿಗಳು ಮತ್ತು ಸ್ನೇಹಿತರಿಂದಲೂ ಶುಭಾಶಯಗಳು ಹರಿದುಬರುತ್ತಿವೆ. ಜಗದೀಶ್​ ಆರ್​ ಚಂದ್ರ ಜೊತೆ ಮದುವೆ ಆದ ಬಳಿಕ ಅಮೂಲ್ಯ ರವರು ನಟನೆಯಿಂದ ಕೊಂಚ ದೂರ ಉಳಿದುಕೊಂಡಿದ್ದು ಅವರು ಆದಷ್ಟು ಬೇಗ ಹೊಸ ಸಿನಿಮಾ ಒಪ್ಪಿಕೊಳ್ಳಲಿ ಎಂಬುದು ಅಭಿಮಾನಿಗಳ ಬಯಕೆಯಾಗಿದೆ.
ಈ ವರ್ಷ ಜೂನ್​​ ತಿಂಗಳಲ್ಲಿ ಅವಳಿ ಗಂಡು ಮಕ್ಕಳಿಗೆ ಜನ್ಮನೀಡಿದ ಅಮೂಲ್ಯ ಅವರು ಸದ್ಯಕ್ಕೆ ಮಕ್ಕಳ ಆರೈಕೆಯಲ್ಲಿ ಬ್ಯುಸಿ ಆಗಿದ್ದು ಅವರ ಹುಟ್ಟುಹಬ್ಬದ ಪ್ರಯುಕ್ತ ಪತಿ ಜಗದೀಶ್​ ಅವರು ವಿಶೇಷವಾಗಿ ಕುಟುಂಬದವರು ವಿಶ್​ ಮಾಡಿಕೊಂಡಿದ್ದಾರೆ. ತಮ್ಮ ಪಾಲಿಗೆ ಈ ದಿನವೇ ವ್ಯಾಲೆಂಟೈನ್​ ಡೇ ಎಂದು ಅವರು ಹೇಳಿದ್ದಾರೆ.ಇನ್ನು ಅಮೂಲ್ಯ ಜೊತೆ ಕ್ಲಿಕ್ಕಿಸಿಕೊಂಡಿರುವ ಹತ್ತಾರು ಫೋಟೋಗಳನ್ನು ಜಗದೀಶ್​ ಅವರು ಹಂಚಿಕೊಂಡಿದ್ದು ನನಗೆ ಸೆಪ್ಟೆಂಬರ್​ 14 ವ್ಯಾಲೆಂಟೈನ್​ ಡೇ.
ಹುಟ್ಟುಹಬ್ಬದ ಶುಭಾಶಯಗಳು ಅಮೂಲ್ಯ. ನೀನು ಯಾವಾಗಲೂ ಮಿನುಗುವ ನಕ್ಷತ್ರವಾಗಿರಬೇಕು. ಇದು ನಾವು ಕಳೆದ ಪ್ರೀತಿಯ ಕ್ಷಣಗಳು ಎಂದು ಈ ಪೋಸ್ಟ್​ಗೆ ಅವರು ಕ್ಯಾಪ್ಷನ್​ ನೀಡಿದ್ದಾರೆ. ಇನ್ನು ನಟಿ ಅಮೂಲ್ಯ ಅವರು ಸ್ಯಾಂಡಲ್​ವುಡ್​ನಲ್ಲಿ ಸಾಕಷ್ಟು ಬೇಡಿಕೆ ಹೊಂದಿದ್ದು  ಸದ್ಯ ಕುಟುಂಬದ ಕಡೆಗೆ ಅವರು ಹೆಚ್ಚು ಗಮನ ಹರಿಸುತ್ತಿದ್ದಾರೆ. ನೆನ್ನೆ ಅಮೂಲ್ಯ ಅವರ ಜನ್ಮದಿನದ   ಜತೆಗೆ ಅವರ ಮಕ್ಕಳಿಗೆ ಆರು ತಿಂಗಳು ತುಂಬಿದೆ.
ಹೌದು ನಟಿ ಅಮೂಲ್ಯಗೆ  ವಿಶೇಷ ದಿನವಾಗಿದ್ದು ತಮ್ಮ ಬರ್ತ್​​ಡೇ ಸಂಭ್ರಮದ ಜೊತೆಗೆ ಅವಳಿ ಮಕ್ಕಳಿಗೆ ಆರು ತಿಂಗಳು ತುಂಬಿದ ಖುಷಿಯಲ್ಲಿದ್ದಾರೆ. ಈ ಎಲ್ಲಾ ಕಾರಣದಿಂದ ಅಮೂಲ್ಯ ಸಂಭ್ರಮಿಸಿದ್ದಾರೆ. ಸದ್ಯ ಇನ್​​ಸ್ಟಾಗ್ರಾಮ್​ನಲ್ಲಿ ಅಮೂಲ್ಯ ಅವರು ಮಕ್ಕಳ ಫೋಟೋ ಹಂಚಿಕೊಂಡಿದ್ದು ಈ ಫೋಟೋಗೆ ಫ್ಯಾನ್ಸ್ ಖುಷಿಯಾಗಿದ್ದಾರೆ. ಇನ್ನು ಬಾಲ ನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟವರು ಅಮೂಲ್ಯ.
ನಂತರ ಅವರು ಚೆಲುವಿನ ಚಿತ್ತಾರ ಸಿನಿಮಾ ಮೂಲಕ ಹೀರೋಯಿನ್​ ಆಗಿ ಬಡ್ತಿ ಪಡೆದರು. ಆ ಸಿನಿಮಾದಿಂದ ಅವರಿಗೆ ಸಿಕ್ಕ ಗೆಲುವು ತುಂಬ ದೊಡ್ಡದು. ಗೋಲ್ಡನ್​ ಸ್ಟಾರ್​’ ಗಣೇಶ್​ ಜತೆ ನಟಿಸಿದ ಆ ಚಿತ್ರ ಸೂಪರ್​ ಹಿಟ್​ ಆಯಿತು. ನಂತರ ಅಮೂಲ್ಯ ಹಿಂತಿರುಗಿ ನೋಡಲೇ ಇಲ್ಲ. ಯಶ್​ ಚಿರಂಜೀವಿ ಸರ್ಜಾ ನೆನಪಿರಲಿ ಪ್ರೇಮ್ ದುನಿಯಾ ವಿಜಯ್​ ಕೃಷ್ಣ ಅಜಯ್​ ರಾವ್​ ಪ್ರಕಾಶ್​ ರಾಜ್​ ಮುಂತಾದ ಸ್ಟಾರ್​ ನಟರ ಜೊತೆ ಅಭಿನಯಿಸುವ ಚಾನ್ಸ್​ ಪಡೆದುಕೊಂಡರು.
ಶ್ರಾವಣಿ ಸುಬ್ರಹ್ಮಣ್ಯ ಚಿತ್ರದಲ್ಲಿನ ನಟನೆಗಾಗಿ ಫಿಲ್ಮ್​ಫೇರ್​ ಪ್ರಶಸ್ತಿ ಅವರಿಗೆ ಒಲಿಯಿತು. 2017ರಲ್ಲಿ ಬಂದ ಮುಗುಳು ನಗೆ ಸಿನಿಮಾದಲ್ಲಿ ಒಂದು ಅತಿಥಿ ಪಾತ್ರ ಮಾಡಿದ ಬಳಿಕ ಅಮೂಲ್ಯ ಅವರು ಬೇರೆ ಯಾವುದೇ ಸಿನಿಮಾದಲ್ಲೂ ನಟಿಸಿಲ್ಲ. ಮತ್ತೆ ಅವರನ್ನು ದೊಡ್ಡ ಪರದೆಯಲ್ಲಿ ನೋಡಬೇಕು ಎಂದು ಅಭಿಮಾನಿಗಳು ಕಾದಿದ್ದಾರೆ. ಆ ಆಸೆ ಯಾವಾಗ ನೆರವೇರಲಿದೆಯೋ ತಿಳಿದಿಲ್ಲ. ಒಂದೊಳ್ಳೆಯ ಕಥೆ ಮತ್ತು ಪಾತ್ರದ ಮೂಲಕ ಬೆಳ್ಳಿಪರದೆಗೆ ಅಮೂಲ್ಯ ರೀ-ಎಂಟ್ರಿ ನೀಡಿದರೆ ಅಭಿಮಾನಿಗಳಿಗೆ ಸಖತ್​ ಖುಷಿ ಆಗಲಿದೆ.

 

View this post on Instagram

 

A post shared by Amulya (@nimmaamulya)

ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...