ಕನ್ಯಾ ರಾಶಿಯವರು ಕಳೆದ 2 ವರ್ಷದಿಂದ ಅನುಭವಿಸಿದ ಕಷ್ಟಗಳಿಗೆ, 2023 ರಲ್ಲಿ ತಕ್ಕ ಪ್ರತಿಫಲ ಸಿಗಲಿದೆ

TODAY NEWS / ಕನ್ನಡ ಸುದ್ದಿಗಳು

ಇನ್ನು ಕೆಲವೇ ದಿನಗಳಲ್ಲಿ ನಾವು ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ ಹೊಸ ವರ್ಷದಲ್ಲಿನ ಹೊಸ ಭವಿಷ್ಯವೂ ಹೇಗಿರಲಿದೆ ಎಂದು ನೋಡಲು ಹಲವರು ಕುತೂಹಲ ದಿಂದಿದ್ದಾರೆ 2023 ನೇ ಇಸವಿಯಲ್ಲಿ ಕನ್ಯಾ ರಾಶಿಯವರಿಗೆ ಒದಗಲಿರುವ ಶುಭಫಲ ಹಾಗೆ ಸಮಸ್ಯೆಗಳ ಬಗ್ಗೆ ಇಲ್ಲಿ ನಾವು ತಿಳಿದುಕೊಳ್ಳೋಣ.

ಕನ್ಯಾ ರಾಶಿಯವರು ಈಗಾಗಲೇ ಎರಡುವರೆ ವರ್ಷಗಳಿಂದ ಸಾಕಷ್ಟು ಪ್ರಮಾಣದಲ್ಲಿ ಜೀವನದಲ್ಲಿ ಸಂಕಷ್ಟಗಳನ್ನು ಅನುಭವಿಸಿದ್ದಾರೆ ಉದಾಹರಣೆಗೆ ದಾಂಪತ್ಯ ಜೀವನದಲ್ಲಿ ಅಸಮತೋಲನ ಮಾನಸಿಕ ಖಿನ್ನತೆಗೆ ಒಳಗಾಗುವುದು ಇತ್ಯಾದಿ ಸಮಸ್ಯೆಗಳನ್ನು ಕನ್ಯಾ ರಾಶಿಯವರು ಎದುರಿಸಿದ್ದಾರೆ ಆದರೆ ಮುಂಬರುವ ದಿನಗಳಲ್ಲಿ ಇವರ ಜೀವನವು ತಿರುವು ಪಡೆದುಕೊಳ್ಳಲಿದೆ

ಕನ್ಯಾ ರಾಶಿಯವರು ಹೊಸದಾಗಿ ಮನೆ ಕಟ್ಟಲು ಇಚ್ಛಿಸಿದ್ದಲ್ಲಿ ಅಥವಾ ಜಾಗವನ್ನು ಖರೀದಿಸಲು ಆಸೆ ಪಟ್ಟಲ್ಲಿ ಈ ಮುಂಬರುವ ಹೊಸ ವರ್ಷ ಒಳ್ಳೆಯ ಕಾಲವಾಗಿರುತ್ತದೆ ಇನ್ನು ಆರೋಗ್ಯದ ವಿಚಾರ ಬಂದರೆ ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ ಕೆಲವರಿಗೆ ಇರುವ ಆರೋಗ್ಯ ಸಮಸ್ಯೆಗಳು ಅಥವಾ ಮಾರಣಾಂತಿಕ ಕಾಯಿಲೆಗಳಿಂದ ಪಾರಾಗುವ ಉಪಾಯ ನಿಮಗೆ ದೊರೆಯುತ್ತದೆ.

ಹಿರಿಯರನ್ನು ಗೌರವಿಸುವುದು ಮತ್ತು ಅವರಿಗೆ ಸಹಾಯ ಮಾಡುವುದನ್ನು ಮುಂದುವರಿಸುವುದರಿಂದ ನಿಮಗೆ ಅನುಕೂಲಕರವಾಗುತ್ತದೆ ಇನ್ನೂ ರೈತರಿಗೆ ತಾವು ಬೆಳೆದ ಬೆಳೆಗಳಿಂದ ಅಪಾರವಾದಂತಹ ಲಾಭಗಳು ದೊರೆಯುವ ಸಾಧ್ಯತೆ ಇದೆ ವಿವಾಹದ ನಿರೀಕ್ಷೆಯಲ್ಲಿ ಇರುವಂತಹ ಕನ್ಯಾ ರಾಶಿಯವರಿಗೆ ಅಥವಾ ವಯಸ್ಸಾಗಿಯೂ ಇನ್ನು ಮದುವೆಯಾಗದೆ ಇರುವ ವ್ಯಕ್ತಿಗಳಿಗೆ ಕಂಕಣ ಬಲವು ಕೂಡಿ ಬರಲಿದೆ

ಹೈನುಗಾರಿಕೆಯಲ್ಲಿ ತೊಡಗಿರುವವರು ಹೋಟೆಲ್ ಉದ್ಯೋಗಗಳಲ್ಲಿ ನಿರತರಾಗಿರುವವರು ಅಥವಾ ಸಿಹಿ ತಿಂಡಿಗಳ ವ್ಯಾಪಾರಿಗಳು ಇತ್ಯಾದಿಗಳಲ್ಲಿ ಅವನತಿಯನ್ನ ಕಂಡಂತಹ ಕನ್ಯಾ ರಾಶಿಯವರಿಗೆ ಈ ವರ್ಷದಲ್ಲಿ ಉತ್ತಮ ಲಾಭವು ಸಿಗಲಿದೆ ಕನ್ಯಾ ರಾಶಿಯ ದಿನ ಕೂಲಿ ಕೆಲಸಗಾರರು ತಮ್ಮ ಜೀವನ ಶೈಲಿಯಲ್ಲಿ ಒಳ್ಳೆಯ ಬದಲಾವಣೆಗಳನ್ನು ಕಾಣುತ್ತಾರೆ ಬಡ್ತಿ ಹೊಂದ ಬಯಸುವವರು ಮತ್ತು ಏನನ್ನಾದರೂ ಸಾಧಿಸುವ ಛಲವುಳ್ಳ ಕನ್ಯಾ ರಾಶಿಯ ಪರಿಶ್ರಮಿಗಳಿಗೆ ಈ ಸಮಯ ಉತ್ತಮದಾಯಕವಾಗಿರುತ್ತದೆ.

ಹಾಗೆಯೇ ಸರ್ಕಾರದಿಂದ ಅಥವಾ ಯಾವುದೇ ಇತರ ವ್ಯಕ್ತಿಗಳಿಂದ ನಿಮಗೆ ಬರಬೇಕಾದಂತಹ ಹಣ ನಿಮ್ಮ ಬಳಿ ಬಂದು ತಲುಪಲು ಯಾವುದೇ ತೊಂದರೆಗಳು ಈ ಸಮಯದಲ್ಲಿ ಉಂಟಾಗುವುದಿಲ್ಲ ಸ್ವಯಂ ಉದ್ಯೋಗಿಗಳಿಗೂ ಸಹ ತಮ್ಮ ಉದ್ಯೋಗದಲ್ಲಿ ಲಾಭ ದೊರೆಯುವುದು ಮತ್ತು ಯಾವುದೇ ಸಾಲಗಳು ಇದ್ದಲ್ಲಿ ಅವುಗಳನ್ನು ತೀರಿಸಲು ಸುಲಭ ಮಾರ್ಗಗಳು ದೊರೆಯುತ್ತವೆ ಮಕ್ಕಳಿಂದ ಒಳ್ಳೆಯ ಸುದ್ದಿಯನ್ನು ಕೇಳುತ್ತೀರಿ ಅದೇ ರೀತಿ ಸಿನಿಮಾರಂಗದಲ್ಲಿ ಕೆಲಸ ನಿರ್ವಹಿಸುತ್ತಿರುವ ವ್ಯಕ್ತಿಗಳಿಗೆ ಈ ವರ್ಷವೂ ತುಂಬಾ ಶುಭವಾಗಿರಲಿದೆ ಮತ್ತು ಅವರು ಅತ್ಯಂತ ಜನಪ್ರಿಯತೆ ಪಡೆದುಕೊಳ್ಳುತ್ತಾರೆ.

ವಿಶೇಷವಾಗಿ ಹೆಣ್ಣು ಮಕ್ಕಳು ಬಂಗಾರ ಅಥವಾ ಇನ್ನಿತರ ಆಭರಣಗಳು ಜಮೀನು ಅಥವಾ ಆಸ್ತಿಗಳು ಇತ್ಯಾದಿಗಳನ್ನು ಪಡೆದುಕೊಳ್ಳುವ ಸಂಭವವು ಹೆಚ್ಚಾಗಿದೆ ಕನ್ಯಾ ರಾಶಿಯವರಿಗೆ ವರ್ಷಂತ್ಯದಲ್ಲಿ ಸ್ವಲ್ಪ ಮಟ್ಟದ ಸಮಸ್ಯೆಗಳು ಎದುರಾದರೂ ಸಹ ದೈವ ಕೃಪೆ ಅವರ ರಾಶಿಯ ಮೇಲೆ ಇರುವುದರಿಂದ ಸರ್ವ ಕಷ್ಟಗಳನ್ನು ಸುಗಮವಾಗಿ ಪರಿಹರಿಸಿಕೊಳ್ಳಲು ಸಾಧ್ಯವಾಗುತ್ತದೆ ಹಿರಿಯರು ತೀರ್ಥಕ್ಷೇತ್ರವನ್ನು ದರ್ಶನ ಮಾಡುವಂತಹ ಪುಣ್ಯವನ್ನು ಪಡೆದುಕೊಳ್ಳುತ್ತಾರೆ.

ಕನ್ಯಾ ರಾಶಿಯವರಲ್ಲಿ ಹಣ ಮತ್ತು ಸಂಪತ್ತು ಇದ್ದು ದಾನ ಧರ್ಮ ಮಾಡುವಂತಹ ಮನಸ್ಥಿತಿ ಉಳ್ಳವರು ಬಡವರಿಗೆ ದಾನವನ್ನು ನೀಡಿ ಮತ್ತು ಪ್ರತಿ ಮಂಗಳವಾರ ಶುಕ್ರವಾರದಂದು ದೇವಿಯನ್ನು ನಿಮ್ಮ ಕುಲದೇವರನ್ನು ಆರಾಧಿಸುವುದರಿಂದ ನಿಮಗೆ ಬಂದಾಗ ಕಷ್ಟಗಳು ಕ್ಷಣಾರ್ಧದಲ್ಲಿ ಪರಿಹಾರ ಗೊಳ್ಳುತ್ತವೆ ಒಟ್ಟಾರೆಯಾಗಿ ಹೇಳುವುದಾದರೆ ಕನ್ಯಾ ರಾಶಿಯವರ ಈ ಹೊಸ ವರ್ಷದ ಹೊಸ ಭವಿಷ್ಯವು ಬಹಳ ಉತ್ತಮ ರೀತಿಯಲ್ಲಿ ಸಾಗುತ್ತದೆ.

ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...